ADVERTISEMENT

ವಾಚಕರ ವಾಣಿ | ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜೂನ್ 2022, 20:00 IST
Last Updated 13 ಜೂನ್ 2022, 20:00 IST

‘ಪರಿಷ್ಕೃತ ಪಠ್ಯದ ಕುರಿತು ಸಾರ್ವಜನಿಕರಿಂದ ಆಕ್ಷೇಪ ಆಹ್ವಾನಿಸುವುದು ಜೇನುಗೂಡಿಗೆ ಕಲ್ಲೆಸೆದಂತೆ’ ಎಂಬ ಡಾ. ರಾಜಪ್ಪ ದಳವಾಯಿ ಅವರ ಲೇಖನ (ಪ್ರ.ವಾ., ಚರ್ಚೆ, ಜೂನ್‌ 11) ಓದಿದೆ. ಇವರಿಗೆ ಮಕ್ಕಳ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ, ಭವಿಷ್ಯದ ಬಗ್ಗೆ ಇರುವ ಕಾಳಜಿ ಎಷ್ಟೊಂದು ಅಪಾರವಾಗಿದೆ– ಮಕ್ಕಳ ಭವಿಷ್ಯ, ವಿಕಾಸದ ಬಗ್ಗೆ ಹೇಳುತ್ತಲೇ ಸಮಾಜದ ಮನಃಸ್ಥಿತಿಯನ್ನೂ ತಿಳಿಸಿ ಹೇಳುತ್ತಾ, ಜೊತೆಗೆ ಸರ್ಕಾರಕ್ಕೂ ರಾಜಕೀಯ ಪಕ್ಷಗಳಿಗೂ ಬಹಳ ಸೂಕ್ಷ್ಮವಾಗಿ (ತಂದೆ, ತಾಯಿ, ಶಿಕ್ಷಕರು ಮಕ್ಕಳಿಗೆ ಮೆಲ್ಲಗೆ ಕಿವಿ ಹಿಂಡಿ ಬುದ್ಧಿ ಹೇಳುವಂತೆ) ಕಿವಿಮಾತು ಹೇಳಿರುವುದು ಶ್ಲಾಘನೀಯ.

ಎಂಥಾ ಪೆದ್ದನಿಗಾದರೂ ಪಠ್ಯಪುಸ್ತಕ ಹೇಗಿರಬೇಕು ಎಂಬುದು ಈ ಲೇಖನ ಓದುತ್ತಿದ್ದಂತೆ ತಿಳಿಯುತ್ತದೆ. ಇಂಥಾ ಬರಹ ನೀಡಿ ಸಮಾಜವನ್ನು ತಮ್ಮಂತಹ ಪ್ರಾಧ್ಯಾಪಕರು ಓದುಗರ ಜೊತೆಗೆ ಸಮಾಜವನ್ನೂ ತಿದ್ದುತ್ತಿದ್ದರೆ ತಮ್ಮ ತಮ್ಮ ತಪ್ಪು, ಸರಿಗಳನ್ನು ತಿದ್ದಿಕೊಂಡು ಉತ್ತಮ ಪ್ರಜೆ ಆಗಬಲ್ಲರೆಂಬುದರಲ್ಲಿ ಅನುಮಾನವೇ ಇಲ್ಲ. ಈ ಮೂಲಕ ನಾನೂ ತಮ್ಮ ಜೊತೆ ಸರ್ಕಾರವನ್ನು ಬೇಡಿಕೊಳ್ಳುವುದು ಇಷ್ಟೆ. ಉತ್ತಮ ಶೈಕ್ಷಣಿಕ ವಾತಾವರಣವನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಬೇಕಾಗಿದೆ. ಇದು ಸರ್ಕಾರದ ಆದ್ಯತೆಯಾಗಬೇಕಾಗಿದೆ.

-ಬಿ.ಜಯಶ್ರೀ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.