ADVERTISEMENT

ವಾಚಕರ ವಾಣಿ | ಉಪನ್ಯಾಸಕರ ನೇಮಕ: ಅರ್ಹತೆಗೆ ಸಿಗಲಿ ತಕ್ಕ ನ್ಯಾಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ನವೆಂಬರ್ 2021, 20:15 IST
Last Updated 26 ನವೆಂಬರ್ 2021, 20:15 IST

ಎರಡು ವರ್ಷಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರಿಂದ, ಈ ಎರಡು ವರ್ಷಗಳಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಯಂತಹ ಉನ್ನತ ಪದವಿ ಮುಗಿಸಿದ ಸಾವಿರಾರು ಅಭ್ಯರ್ಥಿಗಳು ಕೆಲಸವಿಲ್ಲದೆ ಪರದಾಡುವಂತಾಗಿದೆ. ಈ ವರ್ಷ ಕೋವಿಡ್ ಪರಿಣಾಮದಿಂದಾಗಿ ದ್ವಿತಿಯ ಪಿಯುವಿನಲ್ಲಿ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದರಿಂದ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಅತಿ ಹೆಚ್ಚು ಪ್ರವೇಶಾತಿ ದಾಖಲಾ ಗಿದೆ. ಈ ಕಾರಣದಿಂದ ಹೆಚ್ಚುವರಿ ಕಾರ್ಯಭಾರವಿರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿ ಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ತ್ತಾದರೂ ಯಾವ ಕಾಲೇಜಿನಲ್ಲಿ ಕಾರ್ಯಭಾರ ಇದೆ ಎಂಬುದನ್ನು ತಿಳಿಯಲು ಅಭ್ಯರ್ಥಿಗಳು ಹರಸಾಹಸ ಪಡುವಂತಾಗಿದೆ.

ಕಳೆದ ವರ್ಷಗಳಲ್ಲಿ ಶಿಕ್ಷಣ ಇಲಾಖೆ ಆನ್‌ಲೈನ್‌ ಮೂಲಕ ಅರ್ಜಿ ಕರೆದಿತ್ತಾದ್ದರಿಂದ ಅಭ್ಯರ್ಥಿ ಗಳಿಗೆ ಹೆಚ್ಚು ಅನುಕೂಲವಾಗಿತ್ತು. ಆದರೆ ಈ ವರ್ಷ ಆಫ್‌ಲೈನ್‌ ಅರ್ಜಿ ಕರೆದಿರುವುದು ಅವರನ್ನು ಗೊಂದಲಕ್ಕೆ ಈಡುಮಾಡಿದೆ. ಅದರಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಅರ್ಹತೆಗೆ ತಕ್ಕ ನ್ಯಾಯ ಸಿಗುವುದು ಕಷ್ಟವಾಗಿದೆ. ಹಾಗಾಗಿ ಈ ಪ್ರಕ್ರಿಯೆ ಕುರಿತು ಸರ್ಕಾರ ಮತ್ತು ಇಲಾಖೆ ಗಮನಹರಿಸಿ ಅಭ್ಯರ್ಥಿಗಳ ಗೊಂದಲವನ್ನು ಪರಿಹರಿಸಬೇಕು.

- ಡಾ. ಕನಕರಾಯ ಕೆ. ನಾಯಕ,ಮಾನ್ವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.