ADVERTISEMENT

ವಾಚಕರ ವಾಣಿ | ಪುಸ್ತಕದೊಟ್ಟಿಗೆ ಇರಲಿ ಪುಷ್ಪಗುಚ್ಛವೂ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST

ಸರ್ಕಾರಿ ಸಮಾರಂಭಗಳಲ್ಲಿ ಹಾರ ತುರಾಯಿ ಹಾಕುವುದು, ಹೂಗುಚ್ಛ ನೀಡುವುದನ್ನು ನಿಲ್ಲಿಸಿ, ಅದರ ಬದಲಿಗೆ ಪುಸ್ತಕಗಳನ್ನು ಕೊಡಲು ಸರ್ಕಾರ ಆದೇಶಿಸಿದೆ. ಆದರೆ ಪ್ರತಿಭಾನ್ವಿತ ವ್ಯಕ್ತಿಗಳು ಹಾಗೂ ಆದರಣೀಯರನ್ನು
ಪುರಸ್ಕರಿಸುವಾಗ ಹೂವಿನ ಹಾರವು ಒಂದು ಗೌರವಾನ್ವಿತ ಭಾವನೆಯನ್ನು ಮೂಡಿಸುತ್ತದೆ.

ಮೊದಲು ಪುಷ್ಪಹಾರವನ್ನು ಹಾಕಿ, ಕೈಯಲ್ಲಿ ಒಂದು ಹೂಗುಚ್ಛವನ್ನು ಕೊಟ್ಟು, ನಂತರ ಒಳ್ಳೆಯ ಪುಸ್ತಕವನ್ನು ಪ್ರದಾನ ಮಾಡಿದರೆ ಎಷ್ಟು ಚೆನ್ನ? ಅಲ್ಲದೆ, ಇದು ಒಂದು ಗೌರವದ ಸಂಗತಿಯಾಗಿಯೂ ಕಾಣುತ್ತದೆ. ಇದರಿಂದ ಪುಷ್ಪ ಮಾರಾಟಕ್ಕೂ ಸಹಾಯವಾಗುವುದಲ್ಲದೆ ರೈತನಿಗೂ ತಾನು ಬೆಳೆದಂತಹ ಹೂವು ಸದ್ವಿನಿಯೋಗವಾಗುತ್ತಿದೆ ಎನ್ನುವ ಭಾವನೆ ಮೂಡಿಸುತ್ತದೆ.

ಬಾಲಕೃಷ್ಣ ಎಂ.ಆರ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.