ADVERTISEMENT

ವಾಚಕರ ವಾಣಿ | ಕಸಾಪ: ಕಟ್ಟಡದ ಮರುನಿರ್ಮಾಣವಷ್ಟೇ ಸಾಲದು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ನವೆಂಬರ್ 2021, 20:15 IST
Last Updated 24 ನವೆಂಬರ್ 2021, 20:15 IST

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಚುನಾವಣೆ ಬಗೆಗಿನ ಪತ್ರಗಳನ್ನು (ನ. 13, 18, 24) ಹಾಗೂ ಪರಿಷತ್ತಿನ ಅಧ್ಯಕ್ಷರಾಗಿ ಮಹೇಶ್ ಜೋಶಿಯವರ ಗೆಲುವಿನ ನಿಚ್ಚಳ ಸಾಧ್ಯತೆ ವರದಿಗಳನ್ನು ಗಮನಿಸಿ ಈ ಪತ್ರ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷವೊಂದರ ‘ಆಸಕ್ತಿ’ ಬಯಲಾದ (ಪ್ರ.ವಾ., ನ. 24) ಪ್ರಥಮ ಸಂದರ್ಭ ಇದು. ಆಯ್ಕೆಯಾದವರು ತಮ್ಮ ಆಡಳಿತದ ಮೂಲಕ ಇದನ್ನು ನಿರಾಕರಿಸಬೇಕಷ್ಟೆ.

ಸರ್ಕಾರಿ ಮಾಧ್ಯಮಕ್ಕೂ ಸಾಹಿತ್ಯ ಸಂಘಟನೆಗೂ ವ್ಯತ್ಯಾಸ ಇದೆ. ವ್ಯಕ್ತಿತ್ವದ ಛಾಪು, ಹಿಂಬಾಲಕರನ್ನು ಬೆಳೆಸಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು, ಭಿನ್ನಾಭಿಪ್ರಾಯ ಇರುವವರನ್ನು ಹತ್ತಿಕ್ಕುವುದು- ಇವು ಪರಿಷತ್ತಿಗೆ ಕಂಟಕ. ನಿವೃತ್ತ ಅಧಿಕಾರಿಗಳಿಗೆ ಸರ್ಕಾರದೊಡನೆ ವ್ಯವಹರಿಸುವುದು ಸುಲಭ- ನಿಜ. ಆದರೆ ಪ್ರತಿಯೊಂದಕ್ಕೂ ಸರ್ಕಾರದ ವಿವಿಧ ಏಜೆನ್ಸಿಗಳ ನೆರವಿನ ಮೇಲೇ ಅವಲಂಬಿತವಾಗುವ ಪ್ರವೃತ್ತಿ ನಿಲ್ಲಬೇಕು. ಮಹತ್ವದ ಕೆಲಸಗಳಲ್ಲಾದರೂ ಕಳಪೆತನ ಹೋಗಬೇಕು (ಉದಾಹರಣೆಗೆ, ಸಂಕ್ಷಿಪ್ತ ಕನ್ನಡ ನಿಘಂಟಿನ ಹನ್ನೊಂದನೆಯ ಮುದ್ರಣ– 2018 ಬೆಲೆ ಕಡಿಮೆ, ಆದರೆ ಕಾಗದದ ಗುಣಮಟ್ಟ ಹಾಗೂ ಬೈಂಡಿಂಗ್ ಸರಿ ಇಲ್ಲ). ಜಿಲ್ಲಾ ಘಟಕಗಳಲ್ಲಿ ಸಾಹಿತಿ ವೇಷದ ಮರಿ ರಾಜಕಾರಣಿಗಳೇ ಹೆಚ್ಚು ಪ್ರಭಾವ ಹೊಂದಿರುತ್ತಾರೆ. ಚಿಕ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬಲ್ಲವರನ್ನು ಪ್ರೋತ್ಸಾಹಿಸಬೇಕಾಗಿದೆ. ಒಟ್ಟಿನಲ್ಲಿ ಕಸಾಪ ಕಟ್ಟಡದ ಮರುನಿರ್ಮಾಣ ಅಷ್ಟೇ ಸಾಲದು, ಕಾಯಕಲ್ಪ ಕಾಲದ ಕರೆ.

- ಎಚ್.ಎಸ್.ಮಂಜುನಾಥ,ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.