ADVERTISEMENT

ವಾಚಕರ ವಾಣಿ | ಹೆಮ್ಮೆಯ ಸಂಗತಿ, ಆದರೆ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST

ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿಯಿತ್ತ ಸಚಿವರನ್ನು ನಾಡಿನ ಜನ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಸ್ವಾಗತಿಸಿದ್ದು (ಪ್ರ.ವಾ., ಆ. 17) ಹಾಗೂ 75ನೇ ಸ್ವಾತಂತ್ರ್ಯೋತ್ಸವದಂದು ಕಲಘಟಗಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು, 2 ಕಿ.ಮೀ. ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದು (ಪ್ರ.ವಾ., ಆ. 16) ಹೆಮ್ಮೆಯ ವಿಷಯಗಳೇ. ಆದರೆ ಕೊರೊನಾದಿಂದ ಜನ ಬಳಲಿ ಬೆಂಡಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಸ್ವಾಗತ ಕೋರುವುದು, ಮೆರವಣಿಗೆ ಮಾಡುವುದು ಆಘಾತಕಾರಿ ವಿಷಯ.

ಜನರಿಗೆ ಮಾದರಿಯಾಗಿ ಇರಬೇಕಾದ ಜನ ಪ್ರತಿನಿಧಿಗಳು ಕೋವಿಡ್‌ ಮಾರ್ಗಸೂಚಿಗಳನ್ನು ಮರೆತು ತಾವೂ ಮೆರವಣಿಗೆಯಲ್ಲಿ ಪಾಲ್ಗೊಂಡು ಅಸಡ್ಡೆ ತೋರಿದ್ದು ಸರಿಯೇ? ಇಂತಹವರಿಗೆ ಕಾನೂನಿನಲ್ಲಿ ಯಾವ ಶಿಕ್ಷೆ ಎಂಬ ಬಗ್ಗೆ ಆಳುವ ವರ್ಗ ಚಿಂತಿಸಬೇಕು.

-ಯೋಗೇಶ್ ವೈ.ಸಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT