ADVERTISEMENT

ಅತಿಥಿ ಶಿಕ್ಷಕರನ್ನೂ ಪರಿಗಣಿಸಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:08 IST
Last Updated 19 ಜನವರಿ 2022, 15:08 IST

ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಲು ಸರ್ಕಾರವು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು, ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ ತಲಾ ₹ 7,500 ಮತ್ತು ₹ 8,000 ಗೌರವಧನ ನೀಡುತ್ತಿದೆ. ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ಈಗ ಹೆಚ್ಚಳ ಮಾಡಿ ಸಂಕ್ರಾಂತಿ ಸಿಹಿಯನ್ನು ಅವರಿಗೆ ಕೊಟ್ಟಿದೆ. ಆದರೆ ಅತಿಥಿ ಶಿಕ್ಷಕರಿಗೆ ಮಾತ್ರ ಕಹಿಯನ್ನು ನೀಡಲಾಗಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಖಾಸಗಿ ಶಾಲೆಯ ಶಿಕ್ಷಕರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿತು. ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಅಲ್ಪ ಸಂಬಳದಲ್ಲಿ ದುಡಿಯುವ ಅತಿಥಿ ಶಿಕ್ಷಕರು ಇವರ ಕಣ್ಣಿಗೆ ಕಾಣಲಿಲ್ಲ. ಅಲ್ಪ ಗೌರವಧನದಲ್ಲಿಯೇ ಶ್ರದ್ಧೆ, ಭಕ್ತಿಯಿಂದ ಪಾಠ ಮಾಡಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸೇವಾನಿರತ ಶಿಕ್ಷಕರಂತೆ ಅತಿಥಿ ಶಿಕ್ಷಕರು ಬೋಧಿಸುವ ಕೆಲಸ ಕಾರ್ಯಗಳನ್ನು ಸರಿ ಸಮನಾಗಿ ಮಾಡುತ್ತಾ ಬಂದಿದ್ದಾರೆ. ದಯಮಾಡಿ ಅತಿಥಿ ಶಿಕ್ಷಕರಿಗೂ ಗೌರವಧನ ಹೆಚ್ಚಳ ಮಾಡಬೇಕು. ಕೋವಿಡ್ ಪರಿಹಾರ ಹಣವನ್ನು ಒದಗಿಸಬೇಕು.

ಎಸ್.ಜಿ.ಸುಣಗಾರ, ಎ.ಜಿ.ಕಮತಗಿ, ಮದ್ಲೂರ, ಸವದತ್ತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.