ADVERTISEMENT

ನಿಯಮಾವಳಿ ರಚನೆ: ಆಭಾಸ ಮರುಕಳಿಸದಿರಲಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 17:07 IST
Last Updated 1 ಆಗಸ್ಟ್ 2021, 17:07 IST

ಶಾಲೆಗಳ ಪುನರಾರಂಭಕ್ಕೆ ತಜ್ಞರಿಂದ ಮಾರ್ಗಸೂಚಿಗಳ ಚಿಂತನೆ ಆರಂಭವಾಗಿದೆ. ಆದರೆ ಇವು ಸಾಮಾನ್ಯವಾಗಿ ವಾಸ್ತವಾಂಶಕ್ಕೆ ಹತ್ತಿರವಿಲ್ಲದ ವಿಚಿತ್ರ ಪಠ್ಯಗಳಂತೆ ಇರುವುದು ಮಾತ್ರ ವಿಪರ್ಯಾಸ. ವಿದ್ಯಾಗಮ, ಅರ್ಧದಿನದ ಶಾಲೆ, ದಿನ ಬಿಟ್ಟು ದಿನದ ಶಾಲೆ ಮೊದಲಾದ ವಿಫಲ ಪ್ರಯೋಗಗಳ ಬದಲು, ಬಿಸಿಯೂಟ ಸಹಿತ ಪೂರ್ಣ ಪ್ರಮಾಣದ ಸಹಜ ಶಾಲೆಯನ್ನು ಕೋವಿಡ್‌ ಮಾರ್ಗಸೂಚಿಗಳ ಅರಿವು ಮಕ್ಕಳಲ್ಲಿ ಸದಾ ಜಾಗೃತವಾಗಿರುವಂತೆ ನೋಡಿಕೊಂಡು ನಡೆಸುವುದು ಸೂಕ್ತ. ಇದು, ದುಡಿಯಲು ಮನೆ ಬಿಟ್ಟು ಹೋಗುವ ಪೋಷಕರ ಅರ್ಧ ತಲೆಬಿಸಿಯನ್ನು ಕಡಿಮೆ ಮಾಡುತ್ತದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಕಾರ್ಯವು ಆಡಳಿತದ ಆದ್ಯತೆಯಾಗಲಿ. ಸ್ವಯಂಪ್ರೇರಿತ ಮಾರ್ಗಸೂಚಿಗಳ ಪರಿಪಾಲನೆ ಮಾತ್ರ ಭಾರತೀಯ ಪರಿಸ್ಥಿತಿಗೆ ಸೂಕ್ತವಾಗಿದ್ದು, ವಿಚಿತ್ರ ನಿಯಮಾವಳಿಗಳಿಂದ ಏನೂ ಉಪಯೋಗವಾಗದು. ಆದ್ದರಿಂದ ನಿಯಮಾವಳಿಗಳನ್ನು ರೂಪಿಸುವಾಗ ಈ ಹಿಂದಿನ ಆಭಾಸಗಳು ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT