ADVERTISEMENT

ವಾಚಕರ ವಾಣಿ | ದಲಿತ ಪದ ಬಳಕೆಗೆ ನಿರ್ಬಂಧ: ಸೂಕ್ತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರ ವ್ಯವಹಾರದಲ್ಲಿ ‘ದಲಿತ’ ಎನ್ನುವ ಪದ ಬಳಸದಿರುವಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿರುವುದು ಸಂತಸದ ಸಂಗತಿ. ಯಾವುದೇ ಕಾರಣಕ್ಕೂ ಹರಿಜನ, ಗಿರಿಜನ ಎಂದೂ ಬಳಸಬಾರದೆಂದು ತಿಳಿಸಲಾಗಿದೆ. ‌

‘ದಲಿತ’ ಪದವನ್ನು ಬಳಸದಂತೆ ಬಹಳ ವರ್ಷಗಳ ಹಿಂದೆಯೇ ನಿರ್ದೇಶಿಸಬೇಕಿತ್ತು. ಇಷ್ಟು ಕಾಲ ಬಳಕೆ ಮಾಡಿದ್ದೇ ತಪ್ಪು. ಈಗಲಾದರೂ ಅದನ್ನು ಕೈಬಿಡುವ ತೀರ್ಮಾನಕ್ಕೆ ಬಂದಿರುವುದು ಸೂಕ್ತವಾದುದು. ದಲಿತ ಪದವು ಶೋಷಣೆ, ತುಳಿತಕ್ಕೊಳಗಾದ, ದಮನಕ್ಕೊಳಗಾದ, ವಂಚಿತ ಎಂಬ ಅರ್ಥವನ್ನು ನೀಡುತ್ತದೆ. ಇದು ಪರಿಶಿಷ್ಟ ಜಾತಿಯ ಜನರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿತ್ತು. ಅದೇ ರೀತಿ ‘ಗಿರಿಜನ’ ಎಂದರೆ ಬೆಟ್ಟಗಳು, ಗುಡ್ಡಗಳು ಮತ್ತು ಪರ್ವತಗಳಲ್ಲಿ ವಾಸಿಸುವ ಜನ ಎಂದು ತಕ್ಷಣ ಎಲ್ಲರಿಗೂ ಮನವರಿಕೆ ಆಗುತ್ತಿತ್ತು. ಇದರಿಂದ ಆ ಸಮುದಾಯದವರು ಇರುಸುಮುರುಸು ಅನುಭವಿಸುತ್ತಿದ್ದರು. ಪ್ರಸ್ತುತ ಈ ಪದಗಳ ಬಳಕೆ ಕೈ ಬಿಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಏಕವರ್ಗ ಸೂಚಕವಾಗಿ ಬಳಸಬೇಕೆಂದು ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ.

–ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.