ADVERTISEMENT

ವಾಚಕರವಾಣಿ: ನಿವೃತ್ತಿ ವಯಸ್ಸು ಏರಿಕೆ, ಹಿಮ್ಮುಖ ನಡಿಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 20:21 IST
Last Updated 9 ಜನವರಿ 2022, 20:21 IST

ಎಲ್ಲೆಡೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಸರ್ಕಾರವು ತನ್ನ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲು ಮುಂದಾಗಿರುವುದು ಹಿಮ್ಮುಖ ನಡಿಗೆಯೇ ಸರಿ. ಅಷ್ಟಕ್ಕೂ ಅರವತ್ತು ವರ್ಷಗಳ ನಂತರ ಕೆಲಸ ಮಾಡಲು ಮುಂಚಿನ ಸ್ಥೈರ್ಯ ಇರುವುದು ಸಾಧ್ಯವಿಲ್ಲ. ಅಲ್ಲದೆ, ಒಂದು ರಾಜ್ಯದ ಸರ್ಕಾರ ಈ ರೀತಿ ಮಾಡಿದರೆ, ಇತರ ಎಲ್ಲ ರಾಜ್ಯಗಳ ನೌಕರರು ಇಂತಹ ಕ್ರಮಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಾರೆ. ಹೀಗಾಗಿ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಕೇಂದ್ರ ಹಾಗೂ ಇತರ ರಾಜ್ಯ ಸರ್ಕಾರಗಳು ಪರಸ್ಪರ ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಸರ್ಕಾರ ನೌಕರರ ಮನವೊಲಿಸಲು ಹಾಗೂ ಚುನಾವಣಾ ಗಿಮಿಕ್ ಆಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

- ಪ್ರೊ. ಎಂ.ಎಸ್.ರಘುನಾಥ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT