ADVERTISEMENT

ಭ್ರಮಾತ್ಮಕ ಸಮಾಜ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:44 IST
Last Updated 26 ಜನವರಿ 2021, 16:44 IST

‘ಸುಳ್ಳುಗಳ ರಣತಂತ್ರ ಮತ್ತು ಗಣತಂತ್ರ’ ಎಂಬ ನಾರಾಯಣ ಎ. ಅವರ ಲೇಖನ (ಪ್ರ.ವಾ., ಜ. 26) ಸಂದರ್ಭೋಚಿತವಾಗಿದೆ. ಸತ್ಯ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸವನ್ನು ಅರಿಯಲಾಗದಂತಹ ಭ್ರಮಾತ್ಮಕ ಸಮಾಜ ಸೃಷ್ಟಿಯಾಗುತ್ತಿರುವುದು ಆತಂಕಕಾರಿ. ಪುಕ್ಕಲರು ಮಾತ್ರ ತಮ್ಮನ್ನು ಶೂರಾಧಿಶೂರರು ಎಂದು ಬಿಂಬಿಸಿ ಕೊಳ್ಳುತ್ತಾ ಹಿಂಸೆಯನ್ನು ಅವಲಂಬಿಸುತ್ತಾರೆ. ಆಡಳಿತಾತ್ಮಕ ವೈಫಲ್ಯಗಳನ್ನು ಮರೆಸುವ ತಂತ್ರದ ಭಾಗವಾಗಿ ದೇಶಪ್ರೇಮ ಮತ್ತು ದೇಶರಕ್ಷಣೆಯ ಮೊರೆ ಹೋಗುವುದು ಇಂಥವರಿಗೆ ಸಲೀಸು.

‘ಅರ್ಥ ಮಾಡ್ಕೊಂಡ್ ಅಂಗಲ್ ಇಂಗೆ ಅನ್ನೋರ್ ಮಾತು ಗಂಗೆ’ ಎಂಬಂತೆ, ಲೇಖನವು ಸಕಾಲಿಕ ಎಚ್ಚರಿಕೆಯಂತಿದೆ.

- ದಾದಾಪೀರ್ ನವಿಲೇಹಾಳ್,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.