ADVERTISEMENT

ಪರಿಷ್ಕೃತ ಪಠ್ಯ ಶೀಘ್ರ ತಲುಪಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಜುಲೈ 2022, 19:20 IST
Last Updated 6 ಜುಲೈ 2022, 19:20 IST

ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಮೊದಲನೇ ಕಿರುಪರೀಕ್ಷೆಗಳು ನಡೆಯುತ್ತಿವೆ. ಆದರೆ ಆರು ಮತ್ತು ಏಳನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಭಾಗ-1 ಪಠ್ಯಪುಸ್ತಕಗಳು ಕೆಲವೆಡೆ ಇನ್ನೂ ಮಕ್ಕಳ ಕೈಸೇರಿಲ್ಲ. ಹೀಗಾದರೆ ಪಾಠ ಮಾಡುವುದು ಹೇಗೆ? ಮಕ್ಕಳು ಪರೀಕ್ಷೆಗೆ ಸಿದ್ಧರಾಗುವುದು ಯಾವಾಗ? ಪಠ್ಯಪುಸ್ತಕ ಪರಿಷ್ಕರಣೆ ಎಂಬ ಗೊಂದಲ ಮಕ್ಕಳ ಓದಿಗೆ ಮುಳುವಾಗಿ ಪರಿಣಮಿಸಿರುವುದು ದುರದೃಷ್ಟಕರ.

ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲ ಶಾಲೆಗಳಿಗೂ ತಲುಪಿಸಲು ತಡವಾಗುತ್ತದೆ ಎನ್ನುವುದಾದರೆ, ಪಾಠ ಬೋಧನೆಗೆ ಅನುಕೂಲವಾಗುವಂತೆ ಪರಿಷ್ಕೃತ ಪಠ್ಯದ ನಕಲು ಪ್ರತಿಯಾದರೂ ತಲುಪುವಂತೆ ಮಾಡಬೇಕಿತ್ತು. ಹಾಗೆ ಮಾಡದಿರುವುದು ಶಿಕ್ಷಕರು ಹಾಗೂ ಮಕ್ಕಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಈ ದಿಸೆಯಲ್ಲಿ ಸರ್ಕಾರ ಕೂಡಲೇ ಸ್ಪಂದಿಸಬೇಕು. ಮಕ್ಕಳ ಕೈಗೆ ಪುಸ್ತಕ ಸಿಗುವಂತೆ ಮಾಡಬೇಕು.

- ಸುವರ್ಣ ಸಿ.ಡಿ.,ತರೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.