ADVERTISEMENT

ವಾಚಕರ ವಾಣಿ: ಪ್ರತಿಷ್ಠೆಗಾಗಿ ಸ್ಪರ್ಧಿಸಿ ಸಾಧಿಸಿದ್ದೇನು?

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:30 IST
Last Updated 12 ನವೆಂಬರ್ 2020, 19:30 IST

ಇಂಗ್ಲಿಷ್‌ನಲ್ಲಿ also ran ಎಂಬ ಒಂದು ಪದಪುಂಜ ಇದೆ. ನಾನೂ ಓಡಿದೆ ಎಂದು ಹೇಳಿಕೊಳ್ಳುವ ಸ್ಪರ್ಧಿ ಗೆಲ್ಲದವ, ಮಹತ್ವ ಇಲ್ಲದವ. ರಾಜ್ಯದಲ್ಲಿ ಈ ಬಾರಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪಡೆದ ಮತಸಂಖ್ಯೆಯನ್ನು ನೋಡಿದರೆ, ಶಿರಾದಲ್ಲಿ ಮೊದಲ ಅರ್ಥ, ರಾಜರಾಜೇಶ್ವರಿ ನಗರದಲ್ಲಿ ಎರಡನೆಯ ಅರ್ಥ ಬರುತ್ತದೆ. ತಾವು ಪ್ರಚಾರಕ್ಕೆ ಹೋಗಿದ್ದು ‘ಪಕ್ಷವಾಗಿ ನಾವು ಇನ್ನೂ ಇದ್ದೇವೆ’ ಎಂದು ಪ್ರದರ್ಶಿಸಲಷ್ಟೆಯೇ ಎಂಬುದಕ್ಕೆ ರಾಜ್ಯಸಭಾ ಸದಸ್ಯ ದೇವೇಗೌಡರು ಉತ್ತರ ಹೇಳಬೇಕು. ಇನ್ನು ಎಚ್‌.ಡಿ.ಕುಮಾರಸ್ವಾಮಿ ಅವರ ಉದ್ದೇಶ, ವೈಯಕ್ತಿಕವಾಗಿ ಇನ್ನೂ ಚಲಾವಣೆಯಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳುವುದೇ?

ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದಾಗಲೂ ಅವುಗಳ ಮತಗಳು ಪರಸ್ಪರ ವರ್ಗಾವಣೆ ಆಗುತ್ತಿರಲಿಲ್ಲ ಎಂಬುದು ನಿಜವಾದರೂ ಹೆಚ್ಚು ಗೆಲ್ಲುವ ಸಾಮರ್ಥ್ಯ ಇರುವ ಒಬ್ಬ ಅಭ್ಯರ್ಥಿ ಕಣದಲ್ಲಿ ಉಳಿದಿದ್ದರೆ, ಬಿಜೆಪಿಗೆ ಗೆಲ್ಲುವುದು ಇಷ್ಟು ಸುಲಭವಾಗುತ್ತಿರಲಿಲ್ಲ. ಪ್ರತಿಷ್ಠೆಗಾಗಿ ಪ್ರತ್ಯೇಕ ಸ್ಪರ್ಧೆ ಮಾಡಿ ಎರಡೂ ಪಕ್ಷಗಳು ಸಾಧಿಸಿದ್ದೇನು?

–ಎಚ್.ಎಸ್.ಮಂಜುನಾಥ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.