ADVERTISEMENT

ವಾಚಕರ ವಾಣಿ | ಅಡುಗೆ ಎಣ್ಣೆ ದಂಧೆ: ಬೀಳಲಿ ಕಡಿವಾಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 17:08 IST
Last Updated 15 ಮಾರ್ಚ್ 2022, 17:08 IST

ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧದ ಪರಿಣಾಮವಾಗಿ ಅಡುಗೆ ಎಣ್ಣೆ ದರ ವಿಪರೀತ ಏರಿದೆ. ಮುಂದೆ ಸಿಗುತ್ತೋ ಇಲ್ಲವೋ ಎಂಬ ಆತಂಕದಿಂದ ಬೇಡಿಕೆಯೂ ದಿಢೀರನೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ವ್ಯಾಪಾರಿಗಳು ಅಡುಗೆ ಎಣ್ಣೆ ಮತ್ತಿತರ ವಸ್ತುಗಳ ಬೆಲೆಯನ್ನು ತಮಗಿಷ್ಟ ಬಂದಂತೆ ವಸೂಲಿ ಮಾಡುತ್ತಿದ್ದಾರೆ.

ಅಡುಗೆ ಎಣ್ಣೆಯ ಪ್ಯಾಕೆಟ್‌ ಮೇಲೆ ನಿಗದಿತ ದರ ಇರುವುದನ್ನು ಗ್ರಾಹಕರು ಗಮನಕ್ಕೆ ತಂದರೆ, ‘ಅದು ಮೊದಲೇ ಪ್ರಿಂಟಾಗಿತ್ತು. ಅದನ್ನು ಬದಲಿಸಲು ಸಾಧ್ಯವಾಗದು. ನಾವು ಹೆಚ್ಚಿನ ಹಣ ಕೊಟ್ಟು ತರುತ್ತೇವೆ. ಇಷ್ಟವಿದ್ದರೆ ಕೊಂಡುಕೊಳ್ಳಿ, ಬೇಡವಾದರೆ ಬಿಡಿ’ ಎಂದು ಹೇಳುತ್ತಿದ್ದಾರೆ. ತಾಲ್ಲೂಕು ಆಹಾರ ನಿರೀಕ್ಷಕರು ಅಡುಗೆ ಎಣ್ಣೆಯ ದಂಧೆ ನಡೆಯುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ, ಅಂಗಡಿಗಳ ಪರವಾನಗಿ ರದ್ದುಪಡಿಸಿ ಸೂಕ್ತ ದಂಡ ವಿಧಿಸಿದರೆ ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ.
ಭೂಮಿಕಾ ರಂಗಪ್ಪ ದಾಸರಡ್ಡಿ,ಬಿದರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT