ADVERTISEMENT

ವಾಚಕರ ವಾಣಿ: ಬಡ ದಾನಿಗಳ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:55 IST
Last Updated 24 ಆಗಸ್ಟ್ 2020, 15:55 IST

ಇಳಕಲ್ ತಾಲ್ಲೂಕಿನ ಹಿರೇಶಿವನಗುತ್ತಿ ಸರ್ಕಾರಿ ಪ್ರೌಢಶಾಲೆಯ ಡಿ ದರ್ಜೆ ನೌಕರ ಮಹಿಬೂಬ್ ಆಗ್ರಾಅವರುತಮ್ಮ ಮಗನ ಹುಟ್ಟುಹಬ್ಬಕ್ಕೆ ₹ 30 ಸಾವಿರ ವೆಚ್ಚದಲ್ಲಿ ಶಾಲೆಗೆ ಬಣ್ಣ ಬಳಿಸಿರುವುದು ಮತ್ತು ಮಂಗಳೂರು ತಾಲ್ಲೂಕಿನ ಇದಿನಬ್ಬ ಎನ್ನುವ ಅನಕ್ಷರಸ್ಥ ಹಣ್ಣಿನ ವ್ಯಾಪಾರಿ ಸ್ವಂತ ದುಡಿಮೆಯಿಂದ ಉಚಿತವಾಗಿ ಕನ್ನಡ ಶಾಲೆ ನಡೆಸುತ್ತ ಮಾನವೀಯತೆ ಮೆರೆದಿರುವುದು ಶ್ಲಾಘನೀಯ. ಇಂತಹ ಬಡ ದಾನಿಗಳು ನಮಗೆಲ್ಲ ಮಾದರಿ.

‘ಯಾರು ಇತರರಿಗಾಗಿ ಬದುಕುತ್ತಾರೋ ಅವರು ಬದುಕುತ್ತಾರೆ, ತನಗಾಗಿ ಮಾತ್ರ ಬದುಕುವವರು ಇದ್ದರೂ ಸತ್ತಂತೆ’ ಎಂಬ ಸ್ವಾಮಿ ವಿವೇಕಾನಂದರ ಮಾತಿಗೆ ಇವರು ಅನ್ವರ್ಥದಂತಿದ್ದಾರೆ. ತಮ್ಮ ಆದಾಯ ಕಡಿಮೆಯಿದ್ದು ಸ್ವತಃ ಸಂಕಷ್ಟದಲ್ಲಿದ್ದರೂ ಅದೇ ಆದಾಯದಲ್ಲಿ ಸಮಾಜಕ್ಕೆ ಕೊಡುಗೆ ಕೊಡಲು ಮುಂದಾಗಿದ್ದಾರೆ. ಆಯಾ ಜಿಲ್ಲೆಯ ಶಾಸಕರು, ಸಂಸದರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡರೆ ನಮ್ಮ ಎಷ್ಟೋ ಕನ್ನಡ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಇಂತಹ ಪುಣ್ಯದ ಕಾರ್ಯಕ್ಕೆ ಶ್ರೀಮಂತರು ಸಹ ಮುಂದೆ ಬಂದು ಉದಾತ್ತ ಕೊಡುಗೆ ನೀಡಬೇಕು.

-ಶಿವನಕೆರೆ ಬಸವಲಿಂಗಪ್ಪ,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.