ADVERTISEMENT

ಅಭಿವೃದ್ಧಿ ಕಾಮಗಾರಿ: ಕಾಡುತ್ತಿವೆ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 20:00 IST
Last Updated 18 ಏಪ್ರಿಲ್ 2022, 20:00 IST

ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಿಜವಾದರೂ ಅವುಗಳನ್ನು ಮಾಡಿಸಿದ್ದು ಯಾರೆಂಬುದು ತಿಳಿದಿಲ್ಲ ಎಂದು ಕೆಲವು ಗ್ರಾಮಸ್ಥರು ಹೇಳಿರುವುದು (ಪ್ರ.ವಾ., ಏ. 18) ವಿಚಿತ್ರವಾದರೂ ಗಮನಾರ್ಹ ಸುದ್ದಿ. ಸಾರ್ವಜನಿಕ ರಸ್ತೆ ಕಾಮಗಾರಿಗಳನ್ನು ಯಾರಾದರೂ ಮಾಡಬಹುದು, ಯಾರಾದರೂ ಕಾಮಗಾರಿ ಆದೇಶ ಕೊಡಬಹುದು, ಹೇಗಾದರೂ ಮಾಡಬಹುದು ಎನ್ನುವಂತಾಗಿದೆ.

ಎಂಜಿನಿಯರುಗಳ ಪರವಾನಗಿ ಇಲ್ಲದೆ ರಸ್ತೆ ಕಾಮಗಾರಿ ಕೈಗೊಳ್ಳಬಹುದೇ? ಒಬ್ಬ ವ್ಯಕ್ತಿ ಕಾಮಗಾರಿ ಮಾಡಿ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ನಾಲ್ಕು ಕೋಟಿ ಮೊತ್ತದಷ್ಟು ಕೆಲಸ ನಿರ್ವಹಿಸಬಹುದೇ? ಅಷ್ಟೊಂದು ಮೊತ್ತದ ಕೆಲಸ ಮಾಡಲು ಅಗತ್ಯವಾದ ಎಂಜಿನಿಯರುಗಳು ಮತ್ತು ವಾಹನಗಳನ್ನು ಆ ಗುತ್ತಿಗೆದಾರ ಹೊಂದಿದ್ದಾನೆಯೇ? ಆತನ ಹತ್ತಿರ ಅದಕ್ಕೆ ಸರಿಹೊಂದುವ ಮೂಲಬಂಡವಾಳವಾದರೂ ಇರಬೇಕಲ್ಲವೇ? ಎಂತಹ ತುರ್ತು ಕಾಮಗಾರಿಯಿದ್ದರೂ ಸದರಿ ಕೆಲಸ ಪೂರ್ಣವಾದ ತಕ್ಷಣ ಅಂದಾಜು ಪಟ್ಟಿ, ಕೆಲಸದ ಆದೇಶಗಳನ್ನು ಹೊಂದಿರಬೇಕಲ್ಲವೇ? ಇಷ್ಟೆಲ್ಲ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.

-ಕೊಂಪಿ ಗುರುಬಸಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.