ADVERTISEMENT

ವಾಚಕರ ವಾಣಿ: ಸುರಕ್ಷಿತವಾಗಿವೆ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 15:06 IST
Last Updated 8 ಜನವರಿ 2021, 15:06 IST

ಸುದೀರ್ಘ ರಜೆಯ ನಂತರ ಶಾಲಾ, ಕಾಲೇಜು ಆವರಣಗಳು ನಳನಳಿಸುತ್ತಿವೆ. ಇದರೊಂದಿಗೇ ಮೊಬೈಲ್ ಜಗತ್ತಿನಲ್ಲಿ ಮುಳುಗಿಹೋದ ಮಕ್ಕಳನ್ನು ತಿರುಗಿ ಶಾಲೆಯ ವಾತಾವರಣಕ್ಕೆ ಕರೆತರುವ ವಿಶೇಷ ಜವಾಬ್ದಾರಿ ಬೇರೆ! ಆರೆಂಟು ತಿಂಗಳ ಆನ್‌ಲೈನ್ ಶಿಕ್ಷಣ ಒಡ್ಡಿರುವ ಸವಾಲುಗಳನ್ನು ಎದುರಿಸುವುದೇ ಒಂದು ದೊಡ್ಡ ಸವಾಲು. ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಬಾಲಾಪರಾಧಗಳು ಹೆಚ್ಚಾದದ್ದು ಸುಳ್ಳಲ್ಲ.

ಇಷ್ಟೆಲ್ಲದರ ನಡುವೆಯೂ ಇದೀಗ ಶಾಲೆ, ಕಾಲೇಜುಗಳಲ್ಲಿ ನಿಧಾನವಾಗಿ ಹಾಜರಾತಿ ಏರುತ್ತಿರುವಾಗ ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿರುವ ವಿಷಯಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇದರಿಂದ, ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು, ನಗುನಗುತ್ತ ಶಾಲೆಗೆ ಬರುತ್ತಿರುವ ಮಕ್ಕಳು, ಖುಷಿಯಿಂದ ಪಾಠ ಕಲಿಸುತ್ತಿರುವ ಶಿಕ್ಷಕರು ಎಲ್ಲರೂ ಆತಂಕಿತರಾಗುತ್ತಾರೆ.

ಕೊರೊನಾ ಸೋಂಕು ಶಾಲೆ, ಕಾಲೇಜುಗಳಲ್ಲಿ ಮಾತ್ರ ಹರಡಬಹುದಾದ ಸಾಧ್ಯತೆಯೇನಿಲ್ಲ. ಮಾರುಕಟ್ಟೆ, ಮದುವೆ, ಮಾಲ್ ಮುಂತಾದ ಕಡೆಗಳಲ್ಲೆಲ್ಲ ಮಾಸ್ಕ್‌ರಹಿತ ಮುಖಗಳೇ ಕಾಣುತ್ತಿರುವುದರಿಂದ ಅಲ್ಲೆಲ್ಲ ಕೋವಿಡ್ ಜಾಗೃತಿ ಮೂಡಿಸಿ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದು ತುಂಬಾ ಅವಶ್ಯಕ. ಶಾಲೆಗಳು ಈ ಎಲ್ಲ ಜಾಗಗಳಿಗಿಂತಲೂ ಸುರಕ್ಷಿತ.

ADVERTISEMENT

–ಡಾ. ಗೌರಿ ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.