ADVERTISEMENT

ವಾಚಕರ ವಾಣಿ: ಶಾಲೆಗಳಿಗೆ ದಕ್ಕಲಿ ಕ್ಷೇತ್ರಾಭಿವೃದ್ಧಿ ನಿಧಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 19:00 IST
Last Updated 1 ಡಿಸೆಂಬರ್ 2020, 19:00 IST

ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಕಡೆಗಣಿಸಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯು ಕೇವಲ ‘ಮತಬೇಟೆ’ ನಿಧಿಯಾಗಿ ಬಳಕೆಯಾಗುತ್ತಿರುವ ಕುರಿತು ವರದಿಯಾಗಿದೆ (ಪ್ರ.ವಾ., ನ. 29). ಸರ್ಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ನಿಗಮಗಳೇ ಇರುವುದರಿಂದ ಪ್ರತ್ಯೇಕವಾಗಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿ ನಿಧಿಯನ್ನು ನೀಡಿ, ಅದನ್ನು ಅವರು ತಮ್ಮ ವಿವೇಚನೆಯಂತೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಅಗತ್ಯವಿಲ್ಲ. ಹೀಗೆ ಮಾಡಿದಾಗ, ಸಹಜವಾಗಿಯೇ ಅವರು ನಿಧಿಯನ್ನು ಮತ ಸೆಳೆಯುವ ಸಾಧನವಾಗಿ ಬಳಸಿಕೊಂಡು, ಅವಶ್ಯಕತೆ ಇಲ್ಲದಿದ್ದರೂ ತಮಗೆ ಹೆಚ್ಚು ಮತಗಳನ್ನು ತಂದುಕೊಟ್ಟಿರುವ ಭಾಗಗಳಲ್ಲಿಯೋ ಅಥವಾ ತಮ್ಮ ಹಿಂಬಾಲಕರಿಗೆ ಸಹಾಯ ಮಾಡಲೋ ಬಳಸುವ ಸಂಭವವೇ ಹೆಚ್ಚು. ಇದರಿಂದ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ.

ಹೇಗಿದ್ದರೂ ಸರ್ಕಾರವೇ ಅನೇಕ ಯೋಜನೆಗಳಡಿ ಶುದ್ಧ ಕುಡಿಯುವ ನೀರು, ರಸ್ತೆ ಮುಂತಾದ ಕಾಮಗಾರಿಗಳಿಗೆ ನೇರವಾಗಿ ಹಣ ಒದಗಿಸುತ್ತದೆ. ಆದರೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಂಚಿಕೆ ಅನಿವಾರ್ಯವೆಂದಾದಲ್ಲಿ, ಶಾಸಕರು ಈ ನಿಧಿಯನ್ನು ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುವುದು ವಿಹಿತ. ಗುಡಿ-ಗುಂಡಾರಗಳು ಮತ್ತು ಜಾತಿ-ಉಪ ಜಾತಿಯ ಭವನಗಳ ನಿರ್ಮಾಣ ಎಂದೂ ಈ ನಿಧಿಯ ಬಳಕೆಗೆ ಆದ್ಯತೆಯಾಗಬಾರದು.

ಪುಟ್ಟೇಗೌಡ, ಬೆಂಗಳೂರು

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.