ADVERTISEMENT

ಕಿಡಿ ಹಚ್ಚುವ ಹೇಳಿಕೆ ಶೋಭೆ ತರದು

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 20:12 IST
Last Updated 18 ಜನವರಿ 2021, 20:12 IST

ಕರ್ನಾಟಕ– ಮಹಾರಾಷ್ಟ್ರ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ (ಪ್ರ.ಜಾ., ಜ. 18) ಸಂವಿಧಾನಬದ್ಧ ಸ್ಧಾನದಲ್ಲಿರುವ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ರೀತಿ ಕಿಡಿ ಹಚ್ಚುವ ಹೇಳಿಕೆಗಳನ್ನು ನೀಡಿದರೆ ಕೋರ್ಟ್‌ಗೆ ಅಗೌರವವನ್ನು ಸೂಚಿಸಿದಂತೆ. ಮಹಾನಗರಪಾಲಿಕೆ ಚುನಾವಣೆ ಹತ್ತಿರ ಬಂದಿರುವುದರಿಂದ ಅಲ್ಲಿನ ಮರಾಠಿಗರ ಭಾವನೆಗಳನ್ನು ಕೆರಳಿಸಿ ಮತಗಳನ್ನು ಸೆಳೆಯುವುದಕ್ಕೋಸ್ಕರ ಇಂತಹ ಉದ್ಧಟತನದ ಹೇಳಿಕೆಯನ್ನು ಉದ್ಧವ್ ನೀಡಿರಬಹುದು.

ಹಿಂದೆ ಗಡಿ ವಿವಾದ ಬಗೆಹರಿಸಲು ಆಯೋಗ ನೇಮಕವಾಗಬೇಕು ಎಂದು ಪಟ್ಟುಹಿಡಿದು, ಮಹಾಜನ್ ಆಯೋಗದ ನೇಮಕವನ್ನು ಸ್ವಾಗತಿಸಿದವರು ಮಹಾರಾಷ್ಟ್ರದವರೇ. ಮಹಾಜನ್ ವರದಿ ಬಂದ ನಂತರ ವರದಿ ತಮ್ಮ ಪರವಾಗಿ ಇಲ್ಲ ಎಂಬ ಕಾರಣ ನೀಡಿ ವರದಿಯನ್ನು ಧಿಕ್ಕರಿಸಿದವರೂ ಅವರೇ. ಈ ರೀತಿ ಕನ್ನಡಿಗರ ಭಾವನೆ ಹಾಗೂ ಸ್ವಾಭಿಮಾನವನ್ನು ಕೆಣಕುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುವುದನ್ನು ಅಲ್ಲಿನ ಮುಖಂಡರು ಇನ್ನಾದರೂ ನಿಲ್ಲಿಸಲಿ.

ಮಧು ಕೆ.,ಕೊಟ್ಟೂರು, ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.