ADVERTISEMENT

ಎಚ್ಚರಿಕೆಯ ಸಂದೇಶ ರವಾನಿಸಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 20:00 IST
Last Updated 28 ಮಾರ್ಚ್ 2019, 20:00 IST

ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಲು ವ್ಯವಸ್ಥಿತ ಅವಕಾಶ ಮಾಡಿಕೊಟ್ಟಿರುವುದು (ಪ್ರ.ವಾ., ಮಾರ್ಚ್‌ 28) ದುರದೃಷ್ಟಕರ.ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಈ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಗಣಿತ, ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ವೇಳೆ ಆಯಾ ಶಾಲೆಯ ವಿಷಯ ಶಿಕ್ಷಕರನ್ನೇ ಕರೆಸಿ ಉತ್ತರ ಹೇಳಿಕೊಡಲಾಗಿದೆ. ಪಾಲಕರೂ ಇದಕ್ಕೆ ಪ್ರೋತ್ಸಾಹಿಸಿದ್ದಾರೆ. ಹೀಗಾದರೆ, ನಿಜವಾಗಿ ಓದಿ– ಬರೆಯುವರು ಸಹ ಇಂತಹ ಅಭ್ಯಾಸವನ್ನೇ ಕಲಿಯತ್ತಾರೆ. ಇದಕ್ಕೆ ಕಾರಣರಾದವರ ವಿರುದ್ಧ ಅಧಿಕಾರಿಗಳು ಕೂಡಲೇ ಕಠಿಣ ಕ್ರಮ ಕೈಗೊಂಡು, ಎಚ್ಚರಿಕೆಯ ಸಂದೇಶ ರವಾನಿಸಲಿ.

ತ್ಯಾಗರಾಜ ಸಿ.,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT