ADVERTISEMENT

ಬಂದ್‌ಗಳನ್ನು ಬಂದ್‌ ಮಾಡಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಡಿಸೆಂಬರ್ 2020, 19:30 IST
Last Updated 6 ಡಿಸೆಂಬರ್ 2020, 19:30 IST

ಈ ತಿಂಗಳ 5ರಂದು ‘ಕರ್ನಾಟಕ ಬಂದ್’ ಮುಗಿದಿದೆ. ಆಗಲೇ ರೈತರು ಇದೇ 8ರಂದು ‘ಭಾರತ್ ಬಂದ್‌’ಗೆ ಕರೆ ಕೊಟ್ಟಿದ್ದಾರೆ. ಅವರ ಬೇಡಿಕೆಗಳು ಏನೇ ಇರಲಿ, ಬಂದ್‌ ಸಂದರ್ಭದಲ್ಲಿ ನಿಜಕ್ಕೂ ಹಾನಿಗೊಳಗಾಗುವವರು
ಸಣ್ಣ ಪುಟ್ಟ ವ್ಯವಹಾರಸ್ಥರು, ಅಂದೇ ದುಡಿದು ಅಂದೇ ತಿನ್ನುವ ಬೀದಿ ಬದಿ ಮಾರಾಟಗಾರರು ಹಾಗೂ ಯಾರ ತಪ್ಪಿಗೋ ತಾವು ಶಿಕ್ಷೆ ಅನುಭವಿಸುವ ಸಾಮಾನ್ಯ ನಾಗರಿಕರು. ಬಂದ್‌ಗೆ ಕರೆ ಕೊಟ್ಟವರು ಇದನ್ನೆಲ್ಲ
ಯೋಚಿಸುವುದಿಲ್ಲ.

ಕೋವಿಡ್ ಸಾಂಕ್ರಾಮಿಕದಿಂದ 9 ತಿಂಗಳಿನಿಂದ ಯಾತನೆ ಪಡುತ್ತಿರುವ ಜನರಿಗೆ ಇದು ಗಾಯದ ಮೇಲಿನ ಬರೆಯಂತೆ. ಬಂದ್ ಮಾಡಿ ಎಲ್ಲರಿಗೂ ತೊಂದರೆ ಕೊಡುವ ಬದಲು ಶಾಸಕರು, ಸಚಿವರ ಮನೆಗಳಿಗೆ ಮುತ್ತಿಗೆ, ಅಧಿವೇಶನಕ್ಕೆ ತಡೆ, ಸಭೆ ಸಮಾರಂಭಗಳಿಗೆ ಬರುವ ನಾಯಕರಿಗೆ ಘೇರಾವ್, ಕಪ್ಪು ಬಟ್ಟೆ ಧರಿಸಿ ಶಾಂತಿಯುತ ಮೆರವಣಿಗೆಯಂತಹ ಪ್ರತಿಭಟನಾ ಮಾರ್ಗಗಳನ್ನು ಹಿಡಿಯುವುದು ಒಳ್ಳೆಯದು. ದಯವಿಟ್ಟು ಈ ಬಂದ್‌ಗಳನ್ನು ಬಂದ್ ಮಾಡಿ ಪುಣ್ಯ ಕಟ್ಟಿಕೊಳ್ಳಿ.

- ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.