
ಪ್ರಜಾವಾಣಿ ವಾರ್ತೆಗೋವಾಕ್ಕೆ ಹೊಸ ವಿದ್ಯುತ್ ಮಾರ್ಗ ನಿರ್ಮಿಸಲು ರಾಜ್ಯ ವ್ಯಾಪ್ತಿಯ ಪಶ್ಚಿಮ ಘಟ್ಟದ 177 ಹೆಕ್ಟೇರ್ ಕಾಡು ನಾಶವಾಗಲಿದೆ ಎನ್ನುವ ವರದಿ ಓದಿ (ಪ್ರ.ವಾ., ಜುಲೈ 14) ದಿಗಿಲಾಯಿತು.
ಗದಗ, ಧಾರವಾಡ ಭಾಗಕ್ಕೆ ಮೂಲ ಅಗತ್ಯವಾದ ಕುಡಿಯುವ ನೀರು ಒದಗಿಸುವ ಉದ್ದೇಶಿತ ಕಳಸಾ ಬಂಡೂರಿ ಯೋಜನೆಯನ್ನು ವಿರೋಧಿಸಿ, ನದಿ ತಿರುವಿನಿಂದ ಅರಣ್ಯ ನಾಶ, ಪರಿಸರ ಹಾನಿ, ಜಲಚರಗಳ ನಾಶವಾಗುತ್ತದೆ ಎನ್ನುವ ಗೋವಾ ಸರ್ಕಾರವು ಈಗ ತನ್ನ ರಾಜ್ಯದ ವಿದ್ಯುತ್ ಸರಬರಾಜಿಗೆ ಲಕ್ಷಾಂತರ ಮರಗಳ ಮಾರಣಹೋಮಕ್ಕೆ ಪೀಠಿಕೆ ಹಾಕುತ್ತಿರುವುದನ್ನು ಸಹಿಸಲಾಗದು. ಅರಣ್ಯ ನಾಶಕ್ಕೆ ಕಾರಣವಾಗುವ ಈ ಬಗೆಯ ಯೋಜನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು.
- ಎಸ್.ನಾಗರಾಜ ನಾಗೂರ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.