ADVERTISEMENT

ವಾಚಕರ ವಾಣಿ: ಚಿಂತಕರ ಪರ ಯಾರೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST

ಶಾಂತವೇರಿ ಗೋಪಾಲಗೌಡ ಅವರು ನಿಧನರಾಗಿ ಅರ್ಧ ಶತಮಾನ ಗತಿಸಿರುವುದು ‘50 ವರ್ಷಗಳ ಹಿಂದೆ’ (ಪ್ರ.ವಾ., ಜೂನ್‌ 9) ಅಂಕಣದಲ್ಲಿ ಪ್ರಕಟವಾಗಿದೆ. ಮಹಾನ್ ಮಾನವತಾವಾದಿ ಮತ್ತು ಚಿಂತಕ ರಾಮಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡವರು ಗೋಪಾಲಗೌಡರು. ಜೆ.ಎಚ್.ಪಟೇಲ್, ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂಥ ದಿಗ್ಗಜರನ್ನು ಬೆಳಕಿಗೆ ತಂದ ಕೀರ್ತಿ ಅವರದು.

ಇಂಥ ವ್ಯಕ್ತಿಗಳು ಒಂದು ಕಾಲದಲ್ಲಿ ಇದ್ದರೇ ಎಂದು ಈಗ ಸಂಶಯ ಮೂಡುತ್ತದೆ. ವಿಷಾದದ ಸಂಗತಿಯೆಂದರೆ, ರಾಮಮನೋಹರ ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡ ಅವರಂತಹವರ ವಿಷಯವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಎಂದು ಹೇಳುವವರು ಯಾರೂ ಇಲ್ಲದಿರುವುದು!

-ಮುರುಗೇಶ ಹನಗೋಡಿಮಠ, ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.