ADVERTISEMENT

ವಿದ್ಯಾರ್ಥಿಗಳು ಕಾಲೇಜು ಕಡೆ ಮುಖ ಮಾಡಬೇಕು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST

ಕುವೆಂಪು ವಿಶ್ವವಿದ್ಯಾಲಯ ಸೇರಿ ದೇಶದ 38 ವಿಶ್ವವಿದ್ಯಾಲಯಗಳಿಗೆ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಕೋರ್ಸ್ ಆರಂಭಿಸಲು ಯುಜಿಸಿ ಅನುಮತಿ ನೀಡಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಲು, ಅವರು ಹೊಸ ಹೊಸ ವಿಷಯಗಳನ್ನು ಕಲಿಯಲು, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕಾಲೇಜಿನ ವಾತಾವರಣ, ಗೆಳೆತನ ಸಹಕಾರಿ. ಆದರೆ ಪೂರ್ಣ
ಪ್ರಮಾಣದ ಆನ್‌ಲೈನ್ ಕೋರ್ಸ್‌ನಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಒತ್ತಡ ಅನುಭವಿಸುತ್ತಾರೆ. ಯಾವುದೇ ಚಟುವಟಿಕೆಯಿಲ್ಲದೆ ಮಾನಸಿಕ ವಾಗಿ ದುರ್ಬಲರಾಗುತ್ತಾರೆ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧಕ್ಕೆ ಕೊಡಲಿಪೆಟ್ಟು ಬಿದ್ದಂತಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ನಾಲ್ಕಾರು ಜನರೊಂದಿಗೆ ಬೆರೆತು ಕಲಿಯುವುದು ಉತ್ತಮ.

ಈಗ ಕೋವಿಡ್ ಕಾರಣದಿಂದ ಕಾಲೇಜುಗಳಿಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಕೋವಿಡ್‌ ಅಬ್ಬರ ತಗ್ಗಿದ ಬಳಿಕ ವಿದ್ಯಾರ್ಥಿಗಳು ಮತ್ತೆ ಕಾಲೇಜುಗಳ ಕಡೆ ಮುಖ ಮಾಡುವತ್ತ ಗಮನಹರಿಸಬೇಕು. ಅದುಬಿಟ್ಟು ಈ ರೀತಿ ಪೂರ್ಣಪ್ರಮಾಣದ ಆನ್‌ಲೈನ್ ಕೋರ್ಸ್ ಮುಖಾಂತರ ವಿದ್ಯಾರ್ಥಿಗಳಿಗೆ ಕಾಲೇಜನ್ನು ಮರೆಸುವಂತೆ, ಅದರ ಅನುಭವವೇ ಆಗದಂತೆ ಮಾಡುವುದು ಸರಿಯಲ್ಲ. ಹೀಗೆ ಮಾಡಿದರೆ ವಿದ್ಯಾರ್ಥಿಗಳು ವಿದ್ಯಾವಂತರಾಗುವ ಬದಲು ಯಂತ್ರಗಳಂತೆ ಆಗುತ್ತಾರೆ. ಕೌಶಲಕ್ಕೆ ಅವಕಾಶ ಇಲ್ಲದಂತಾಗುತ್ತದೆ ಅಷ್ಟೆ.

- ಆಕಾಶ್ ಆರ್‌.ಎಸ್‌., ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.