ADVERTISEMENT

ಪೋಷಕರು ಹೇಗೆ ಹೊಣೆಯಾಗುತ್ತಾರೆ?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:31 IST
Last Updated 13 ಡಿಸೆಂಬರ್ 2019, 20:31 IST

‘ಮಕ್ಕಳು ಕೆರೆಯಲ್ಲಿ ಈಜಿದರೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಕಂದಾಯ ಸಚಿವರು ಹೇಳಿದ್ದಾರೆ. ಇದೊಂದು ಬಾಲಿಶ ಹೇಳಿಕೆ. ಯಾವ ಪೋಷಕರು ತಾನೇ ತಮ್ಮ ಮಕ್ಕಳು ಈಜಲು ಹೋಗಿ ಸಾಯಲಿ ಎಂದು ಬಯಸುತ್ತಾರೆ? ಎಷ್ಟೋ ಬಾರಿ ಪೋಷಕರ ಗಮನಕ್ಕೇ ಬಾರದಂತೆ ಮಕ್ಕಳು ಈಜಲು ಹೋಗುತ್ತಾರೆ. ಆಗ ಪೋಷಕರು ಹೇಗೆ ಹೊಣೆಗಾರರಾಗುತ್ತಾರೆ? ಬದಲಿಗೆ, ಹೆಚ್ಚು ಅಪಾಯ, ಆಳವಿರುವ ಕೆರೆಗಳ ಬಳಿ ಕಣ್ಗಾವಲು ಸಿಬ್ಬಂದಿಯನ್ನು ನೇಮಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಸಾವುಗಳನ್ನು ತಡೆಯಲು ಸಾಧ್ಯ.

ಇಂದಿರಾ ಶ್ರೀಧರ್,ಮಳಲಕೆರೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT