ADVERTISEMENT

ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕಾರ: ಕನ್ನಡಿಗರ ಪರ ಸಂದೇಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:15 IST
Last Updated 18 ಜೂನ್ 2019, 20:15 IST

ರಾಜ್ಯದ ನೂತನ ಸಂಸದರಲ್ಲಿ ಬಹುತೇಕರುಕನ್ನಡದಲ್ಲಿಯೇ ಪ್ರಮಾಣವಚನಸ್ವೀಕರಿಸಿದ್ದಾರೆ(ಪ್ರ.ವಾ., ಜೂನ್‌ 18). ಈ ಮೂಲಕ, ಕನ್ನಡಿಗರೆಲ್ಲಾ ಒಂದು ಎಂಬ ಸಂದೇಶ ರವಾನೆಯಾಗಿದೆ. ಅಲ್ಲದೆ, ನಮ್ಮ ಭಾಷೆಯ ಮಹತ್ವ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ದಿವಂಗತ ಜೆ.ಎಚ್.ಪಟೇಲ್ ದಶಕಗಳ ಹಿಂದೆಯೇ ಕನ್ನಡದಲ್ಲಿ ಮಾತನಾಡುವ ಮೂಲಕ ಇಡೀ ಲೋಕಸಭೆಯಲ್ಲಿ ರೋಮಾಂಚನವನ್ನು ಉಂಟು ಮಾಡಿದ್ದರು. ನಂತರ ಸಂಸದ ಎಂ.ಶಿವಣ್ಣ ಕನ್ನಡದಲ್ಲಿಯೇ ಮಾತನಾಡಿದ್ದರು. ಅನಂತಕುಮಾರ್ ಅವರಂತೂ ಸಮಯ ಸಂದರ್ಭ ಒದಗಿ ಬಂದಾಗಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದರು.

ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದೆನಿಸಿರುವ ಹಾಗೂ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡದ ಪರ ದನಿ ಎತ್ತುವುದು ಸಂತೋಷದಾಯಕ ಕಾರ್ಯ.

-ಕೆ.ವಿ.ವಾಸು,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.