ADVERTISEMENT

ಇನ್ನೂ ಎರಡು ಕಾರಣಗಳಿವೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:45 IST
Last Updated 27 ಏಪ್ರಿಲ್ 2020, 19:45 IST

ಭಾರತದ ಒಂದು ಮುಸ್ಲಿಂ ಸಂಘಟನೆ (ತಬ್ಲೀಗ್‌ ಜಮಾತ್‌) ಹಿಂದಿನ ತಿಂಗಳು ಮಾಡಿದ ಬೇಜವಾಬ್ದಾರಿ ಕೆಲಸವು ನಮ್ಮ ದೇಶದಲ್ಲಿ ಕೊರೊನಾ ಸೋಂಕು ಹರಡಲು ಒಂದು ಕಾರಣವಾಯಿತು ಎಂದು ಎ.ಸೂರ್ಯಪ್ರಕಾಶ್‌ ತಮ್ಮ ಅಂಕಣದಲ್ಲಿ (ಪ್ರ.ವಾ., ಏ. 27) ಬರೆದಿದ್ದಾರೆ.

ತಬ್ಲೀಗ್‌ ಜಮಾತ್‌ನ ಕಾರ್ಯಕ್ರಮಕ್ಕೂ ಮುನ್ನ ಜರುಗಿದ ಇನ್ನೂ ಎರಡು ಕಾರಣಗಳನ್ನು ಅವರು ಪ್ರಸ್ತಾಪಿಸಿಲ್ಲ.

1. ಭಾರತದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದರೂ ಫೆಬ್ರುವರಿ ತಿಂಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮಹಾಶಯರನ್ನು ಗುಜರಾತ್‌ಗೆ‌ ಕರೆತಂದು, ಅಹಮದಾಬಾದ್‌ನ ರಸ್ತೆಯ ಎರಡೂ ಬದಿಗಳಲ್ಲಿ ಲಕ್ಷಾಂತರ ಜನರನ್ನು ನಿಲ್ಲಿಸಿ ಟಾಟಾ ಮಾಡಿಸಿದ್ದು. ಆ ಸುದ್ದಿಯು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯಲಿ ಎಂಬ ಕಾರಣದಿಂದ ಬೇರೆ ಬೇರೆ ದೇಶಗಳ ಸುದ್ದಿಮಾಧ್ಯಮಗಳ ಪ್ರತಿನಿಧಿಗಳನ್ನು ಕರೆತರಲಾಗಿತ್ತು. ಅವರು ಹರಡಿರಬಹುದಾದ ‘ರೋಗಾಣು’ಗಳು.

ADVERTISEMENT

2. ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವ ಸಲುವಾಗಿ ಆ ರಾಜ್ಯದ ಶಾಸಕರನ್ನು ವಿಮಾನಗಳಲ್ಲಿ ಬೇರೆಡೆಗೆ ಸಾಗಿಸಿ ಕರೆತರಲು ಅನುವಾಗುವಂತೆ ಲಾಕ್‌ಡೌನ್‌ ಜಾರಿಗೊಳಿಸಲು ವಿಳಂಬ ಮಾಡಿದ್ದು. ಈ ಎರಡನ್ನೂ ಸೇರಿಸಿ ಬರೆದಿದ್ದರೆ ಲೇಖನ ಪೂರ್ಣವಾಗುತ್ತಿತ್ತೇನೋ...!

-ಶಿರವಾರ ವೀರಣ್ಣ, ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.