ADVERTISEMENT

ವಾಚಕರವಾಣಿ: ಸೂಕ್ತ ನೀತಿ ರೂಪಿಸುವುದೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 19:30 IST
Last Updated 9 ಜನವರಿ 2022, 19:30 IST

ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿದರೆ ಅವುಗಳಿಂದ ಬರುವ ವರಮಾನವನ್ನು ದೇವಾಲಯಗಳ ಅಭಿವೃದ್ಧಿ ಹಾಗೂ ಇತರ ಸಮಾಜ ಸೇವಾ ಕಾರ್ಯಗಳಿಗೆ ಬಳಸಬಹುದು ಎಂಬುದು ಒಪ್ಪಬಹುದಾದ ವಿಷಯವಾದರೂ ದೇವಾಲಯಗಳ ಹಣ ದುರ್ಬಳಕೆ ಆಗಲಾರದು ಎಂಬ ಖಾತರಿಯಿಲ್ಲ.

ನೆಮ್ಮದಿಯ ಏಕಮಾತ್ರ ತಾಣಗಳಾದ ದೇವಾಲಯಗಳೂ ಜಾತಿ, ರಾಜಕೀಯದ ಅಖಾಡಗಳಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ದೇವಾಲಯಗಳು ಸರ್ಕಾರದ ಹಿಡಿತದಲ್ಲೇ ಇದ್ದು, ಅವುಗಳಿಂದ ಬರುವ ವರಮಾನವನ್ನು ಅವುಗಳ ಅಭಿವೃದ್ಧಿ ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ನೀತಿಯನ್ನು ರೂಪಿಸುವುದು ಇದಕ್ಕೆ ಸೂಕ್ತ ಪರಿಹಾರವಾಗಬಲ್ಲದು.

- ಪ್ರಮೋದ್ ಈ.ಟಿ.,ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.