ADVERTISEMENT

ದೇವಸ್ಥಾನಗಳು ಮತ್ತು ಸರ್ಕಾರ

ವಿನುತಾ.ಕುಶಾಲನಗರ
Published 16 ಜನವರಿ 2019, 20:00 IST
Last Updated 16 ಜನವರಿ 2019, 20:00 IST

ನಮ್ಮ ಭಾರತವು ಮತನಿರಪೇಕ್ಷ ಗಣರಾಜ್ಯ ಎಂಬ ವಿಶೇಷಣ ಹೊಂದಿದೆ. ಇಲ್ಲಿ ದೇವಸ್ಥಾನಗಳಿವೆ, ಮಸೀದಿಗಳಿವೆ, ಚರ್ಚುಗಳಿವೆ. ಸರ್ಕಾರಕ್ಕೆ ಮತಗಳ ಬಗ್ಗೆ ಸಂಬಂಧವಿರಬಾರದು ಎನ್ನುತ್ತದೆ ಸೆಕ್ಯುಲರಿಸಂ. ಮತ ಅಥವಾ ಜಾತಿ ವಿಷಯಗಳು ಆಡಳಿತದಿಂದ ದೂರವಿರಬೇಕು, ಯಾವುದೇ ಕಾರಣದಿಂದಲೂ ಜಾತಿ, ಮತಗಳು ಸರ್ಕಾರದ ಆಡಳಿತದಲ್ಲಿ ತಲೆ ಹಾಕಬಾರದು ಎಂದು ತಿಳಿದುಬರುತ್ತದೆ. ಯಾವುದೇ ಪಕ್ಷವು ಗೆದ್ದು ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ಅದು ಪಕ್ಷದ ಸರ್ಕಾರ ಆಗಿರುವುದಿಲ್ಲ. ಅದು ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮಾತ್ರ ಆಗಿರುತ್ತದೆ. ಇದು ಸಂವಿಧಾನದ ಆಶಯವೂ ಆಗಿದೆ. ಇನ್ನು ಭಾರತದಲ್ಲಿರುವ ಮತಗಳು ಅವುಗಳ ಪಾಡಿಗೆ ಅವು ಇರಬೇಕು. ಪೂಜೆ, ಪ್ರಾರ್ಥನೆ ಅವುಗಳ ಕೆಲಸ ಅಲ್ಲ. ಇಂತಹವುಗಳ ವ್ಯವಹಾರವು ಸರ್ಕಾರಕ್ಕೆ ಏಕೆ ಬೇಕು?

ಆಯಾ ಮತದ ಪೂಜಾ, ಪ್ರಾರ್ಥನಾ ಮಂದಿರಗಳ ಆಡಳಿತವು ಮತಗಳ ಖಾಸಗಿ ವಿಚಾರ. ಚರ್ಚುಗಳನ್ನು ಪೋಪ್, ಬಿಷಪ್, ಪಾದ್ರಿಗಳು ನೋಡಿಕೊಳ್ಳುತ್ತಾರೆ. ಮಸೀದಿಗಳನ್ನು ಬುಖಾರಿ, ಪೇಶಿಮಾಮ್ ಮುಂತಾದವರು ನೋಡಿಕೊಳ್ಳುತ್ತಾರೆ. ಆದರೆ, ದೇವಸ್ಥಾನಗಳನ್ನು ಮಾತ್ರ ಮುಜರಾಯಿ ಇಲಾಖೆ ಯಾಕೆ ನೋಡಿಕೊಳ್ಳಬೇಕು?ದೇವಸ್ಥಾನಗಳಾದರೆ ಸಮಿತಿಗಳು, ಮಠವಾದರೆ ಮಠಾಧೀಶರು ನೋಡಿಕೊಳ್ಳಬೇಕು. ಇದೊಂದಕ್ಕೆ ಸರ್ಕಾರ ಯಾಕೆ ಕೈಹಾಕುತ್ತದೆ? ಮಸೀದಿಗೆ ಕೈಹಾಕುತ್ತದೆಯೇ? ಇದರ ಬಗ್ಗೆ ತಿಳಿದವರು ಹೇಳುತ್ತಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT