ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಅಪಾರ ಹಣ ಸುರಿಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಪರಿಪಾಟ ಮುಂದುವರಿದಿದೆ. ಆದರೆ ಈ ಜಿಲ್ಲೆಯಲ್ಲಿ ಯಾವ ದೇವಾಲಯವೂ ಶಿಥಿಲಾವಸ್ಥೆಯಲ್ಲಿ ಇರುವುದು ಕಂಡುಬರುವುದಿಲ್ಲ.
ಹಣವನ್ನು ಈ ರೀತಿ ಜೀರ್ಣೋದ್ಧಾರದ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡುವ ಬದಲು ಅದನ್ನು ಸಮಾಜ ಸೇವೆಗೆ, ಶಾಲೆಗಳ ಪುನರ್‌ನಿರ್ಮಾಣಕ್ಕೆ, ಆಸ್ಪತ್ರೆಗಳಿಗೆ, ನೀರಿನ ಕೊಳಗಳ ಸಂರಕ್ಷಣೆಗೆ, ವೃಕ್ಷ– ಪ್ರಾಣಿ ಪಕ್ಷಿಗಳ ಪೋಷಣೆಗೆ ಉಪಯೋಗಿಸಿದರೆ ಅದು ಸಾರ್ಥಕವಾದೀತು. ಅಂತಹ ಕೆಲಸ ನಿಜಕ್ಕೂ ಶ್ಲಾಘನೀಯ.
–ಲಲಿತಾ,ಉಡುಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.