ADVERTISEMENT

ಏಕತೆಗಾಗಿ ಕಾನೂನು ಕಠಿಣವಾಗಲಿ

ಸುಗ್ಗನಹಳ್ಳಿ ಷಡಕ್ಷರಿ
Published 17 ಫೆಬ್ರುವರಿ 2019, 20:15 IST
Last Updated 17 ಫೆಬ್ರುವರಿ 2019, 20:15 IST

ಭಯೋತ್ಪಾದನಾ ಸಂಘಟನೆಗಳಿಗೆ ಆಶ್ರಯ ನೀಡಿ ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಆದರೆ, ಕರ್ನಾಟಕವೂ ಸೇರಿದಂತೆ ಭಾರತದ ಹಲವು ಕಡೆ ಕೆಲವು ವಿಕೃತ ವ್ಯಕ್ತಿಗಳು ದಾಳಿಯನ್ನು ಸಂಭ್ರಮಿಸಿ, ದಾಳಿಕೋರನನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ಅಂಥವರನ್ನು ಪೊಲೀಸರು ಬಂಧಿಸುತ್ತಿದ್ದಾರೇನೋ ಸರಿ. ಆದರೆ ಮುಂದೇನಾಗುತ್ತದೆ?

ಒಂದು ವಿಚಾರಣೆ, ಮುಂದೆ ಹೀಗೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಬಿಡುಗಡೆ. ದೇಶವಿರೋಧಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಹರಿಯಬಿಟ್ಟವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಲು‌ ಸಾಧ್ಯವಿಲ್ಲವೇ? ನಮ್ಮ ಕಾನೂನು ಕಠಿಣವಾಗದಿದ್ದರೆ ಇಂತಹ ದುಷ್ಕೃತ್ಯ ತಡೆಯಲು ಸಾಧ್ಯವಿಲ್ಲ. ದೇಶದ ಏಕತೆಗೆ ಇದು ಅಗತ್ಯ.

ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.