ADVERTISEMENT

ವಾಚಕರ ವಾಣಿ| ಸಮರ್ಥನೆಯ ಹೇಳಿಕೆ ಖಂಡನೀಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST

‘ನಾಡಗೀತೆಯ ಸಾಲುಗಳನ್ನು ತಿರುಚಿದ ಮತ್ತು ಕುವೆಂಪು ಅವರನ್ನು ಗೇಲಿ ಮಾಡಿದ ಕೃತ್ಯದಲ್ಲಿ ರೋಹಿತ್ ಚಕ್ರತೀರ್ಥ ಅವರ ತಪ್ಪಿಲ್ಲ, ಅವರು ಆ ಪೋಸ್ಟ್ ಹಂಚಿಕೊಂಡಿದ್ದಾರೆ ಅಷ್ಟೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ (ಪ್ರ.ವಾ., ಜೂನ್‌ 20). ಶಿಕ್ಷಣ ಸಚಿವರನ್ನೂ ಒಳಗೊಂಡಂತೆ ಬಿಜೆಪಿಯ ಇತರ ಕೆಲವು ಮುಖಂಡರು ಇದೇ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಹಾಗೂ ಖಂಡನೀಯವಾದ ಸಂಗತಿ. ಯಾವಾಗಲೋ ದೂರು ದಾಖಲಾಗಿ ‘ಬಿ’ ರಿಪೋರ್ಟ್ ತೆಗೆದುಕೊಂಡಿದ್ದಾರೆ ಎಂಬ ಸಬೂಬು ಸಮ್ಮತಿಸುವಂತ ಹುದಲ್ಲವೇ ಅಲ್ಲ.

ಕುವೆಂಪು ಅವರಂತಹ ಮಹಾನ್ ಚೇತನದ ಬಗ್ಗೆ ಎಲ್ಲ ಗೊತ್ತಿದ್ದೂ ಹೀಗೆ ಮಾತನಾಡುವುದು ಸರಿಯಲ್ಲ. ಆ ಹೇಳಿಕೆಯ ಮೂಲ ಬೇರೆಯವರೇ ಆಗಿದ್ದರೂ, ಅದನ್ನು ತಕ್ಷಣವೇ ಖಂಡಿಸುವುದು, ದೂರು ಕೊಡುವುದು ಬಿಟ್ಟು, ‘ಮೂಲ ಕವಿಗಳು ಇದ್ದರೆ ಮುಂದೆ ಬನ್ನಿ, ಬುರ್ಜ್ ಖಲೀಫಾ ಕೊಡುತ್ತೇನೆ’ ಎಂದಿರುವ ಚಕ್ರತೀರ್ಥ ಅವರ ಮಾತುಗಳು ಈ ಎಲ್ಲ ಮಂತ್ರಿ ಮಾನ್ಯರಿಗೆ ತಪ್ಪು ಅಂತ ಕೂಡ ಅನ್ನಿಸುತ್ತಿಲ್ಲ!

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.