ADVERTISEMENT

ಇನ್ನಿಲ್ಲದ ಸರ್ಕಸ್‌, ಪ್ರಹಸನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 19:30 IST
Last Updated 19 ಜನವರಿ 2021, 19:30 IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ಅಳೆದೂ ಸುರಿದೂ ವರಿಷ್ಠರ ಒಪ್ಪಿಗೆ ಪಡೆದು ತಮ್ಮ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. ನಿರೀಕ್ಷೆಯಂತೆಯೇ ಮಂತ್ರಿ ಸ್ಥಾನ ಸಿಗದವರ ಅತೃಪ್ತಿ ಭುಗಿಲೆದ್ದಿದೆ. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸೇರಿದಂತೆ ಹಲವು ಶಾಸಕರು ಬೆಂಕಿ ಉಂಡೆಗಳನ್ನು ಉಗುಳಿದ್ದಾರೆ. ಕೆಲವು ಶಾಸಕರು ಮುಖ್ಯಮಂತ್ರಿ ವಿರುದ್ಧ ಸಿ.ಡಿ. ಬಾಂಬ್ ಸಿಡಿಸುವುದಾಗಿ ಹೇಳಿದ್ದಾರೆ.

ಸಂವಿಧಾನದ ಪ್ರಕಾರ, ಸಂಪುಟದ ರಚನೆ ಮತ್ತು ಪುನರ್‌ರಚನೆ ಮುಖ್ಯಮಂತ್ರಿಯ ಪರಮಾಧಿಕಾರ. ಆದರೆ ಯಾವೊಬ್ಬ ಮುಖ್ಯಮಂತ್ರಿಯೂ ತನ್ನ ಪರಮಾಧಿಕಾರವನ್ನು ಯುಕ್ತ ರೀತಿಯಲ್ಲಿ ಚಲಾಯಿಸಿಲ್ಲ. ಸಂಪುಟಕ್ಕೆ ಮಂತ್ರಿಗಳನ್ನು ನೇಮಿಸಿಕೊಳ್ಳುವಾಗ ಹಲವಾರು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಜಾತಿಗಳ ಸಮತೋಲನ, ಜಿಲ್ಲಾವಾರು ಪ್ರಾತಿನಿಧ್ಯ, ವೈಯಕ್ತಿಕ ಹಿನ್ನೆಲೆ, ಪಕ್ಷದಲ್ಲಿ ಅವರ ಅನುಭವ, ಹಿರಿಮೆ ಮುಂತಾದವುಗಳನ್ನು ಪರಿಗಣಿಸಬೇಕಾಗುತ್ತದೆ. ಆದರೂ ಯಡಿಯೂರಪ್ಪನವರು ಧೈರ್ಯ ಮಾಡಿ ಕಬ್ಬಿಣದ ಕಡಲೆಯನ್ನು ನುಂಗಿದ್ದಾರೆ. ಅತೃಪ್ತ ಶಾಸಕರ ಅಸಮಾಧಾನವನ್ನು ತಣಿಸಲು ಮುಖ್ಯಮಂತ್ರಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯ ಪ್ರಹಸನಕ್ಕೆ ತೆರೆಬಿದ್ದಿರುವುದು ಸಮಾಧಾನಕರ ಸಂಗತಿ.

ಕೆ.ವಿ.ವಾಸು,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.