ADVERTISEMENT

ವಾಚಕರ ವಾಣಿ | ಪಾಠ ಇರುವುದು ಪಠ್ಯಪುಸ್ತಕದಲ್ಲಷ್ಟೇ ಅಲ್ಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 15:57 IST
Last Updated 17 ಜುಲೈ 2020, 15:57 IST

‘ಪಠ್ಯ ಪೂರೈಸಿದರೆ ಸಾಕೇ?’ ಎಂಬ ಅವಿಜಿತ್ ಪಾಠಕ್ ಅವರ ಲೇಖನ (ಪ್ರ.ವಾ., ಜುಲೈ 17) ಸಕಾಲಿಕವಾಗಿದೆ. ಕೊರೊನಾದ ಈಗಿನ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಪರಿಸರದಲ್ಲಿ ಆಗಿರುವಂತಹ ಬದಲಾವಣೆಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಜನಜೀವನದಲ್ಲಿ ಇಷ್ಟೆಲ್ಲಾಏರುಪೇರುಗಳು ಆಗುತ್ತಿದ್ದರೂ ನಾವು ಏನೂ ಆಗಿಲ್ಲ ಎಂಬಂತೆ ಸಹಜ ಜೀವನ ನಡೆಸುವುದು ಕಷ್ಟ ಎಂಬ ಅರಿವು ನಮ್ಮಲ್ಲಿರಬೇಕು. ಕೇವಲ ಪಠ್ಯಪುಸ್ತಕದ ಬೋಧನೆಯೇ ಶಿಕ್ಷಣ ಅಲ್ಲ, ಕಲಿಯಲು ಪ್ರಕೃತಿಯಲ್ಲಿ ಬೇಕಾದಷ್ಟು ಪಾಠಗಳಿವೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾಗಿದೆ.
–ಸುರೇಶ್ ಗೌರೆ,ನವನಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT