ADVERTISEMENT

ರೈತ ಸಮೂಹಕ್ಕೆ ಬೇಕು ವರ್ಗಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 19:31 IST
Last Updated 31 ಜನವರಿ 2022, 19:31 IST

ರೈತರ ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದ ಲೇಖನದಲ್ಲಿ (ಪ್ರ.ವಾ., ಜ. 28) ಡಾ. ಮುಜಾಪ್ಫರ್ ಅಸ್ಸಾದಿ ಅವರು, ರೈತರು ಒಂದು ವರ್ಗವಾಗಿ ಬದಲಾಗಬಹುದೇ ವಿನಾ ವರ್ಗಕ್ಕೋಸ್ಕರವಾಗಿ ಪಕ್ಷ ಮತ್ತು ಚುನಾವಣಾ ರಾಜಕಾರಣವನ್ನು ಮಾಡಲಾರರು ಎಂದು ಹೇಳಿದ್ದಾರೆ.

ಕಾರ್ಲ್‌ಮಾರ್ಕ್ಸ್‌ ಪ್ರಕಾರ, ಸಮೂಹವು ಒಂದು ವರ್ಗವಾಗಬೇಕಾದರೆ ಎರಡು ನಿರ್ಧಾರಕ ಅಂಶಗಳೆಂದರೆ 1. ವಸ್ತುನಿಷ್ಠ ಅಂಶಗಳು (objective Determinants) 2. ಮನೋನಿಷ್ಠ ಅಂಶಗಳು ( Subjective Determinants). ಕೃಷಿಕಾರ್ಮಿಕರು ಮತ್ತು ಭೂ ಮಾಲೀಕರು ಹೆಚ್ಚುಕಡಿಮೆ ಒಂದೇ ಬಗೆಯ (ಉತ್ಪಾದನೆಯ ಸಾಧನ) ಸಂಬಂಧವನ್ನು ಹೊಂದಿರುತ್ತಾರೆ. ಒಂದು ಸಮೂಹವು ಒಂದು ವರ್ಗವಾಗಬೇಕಾದರೆ (Class in Itself) ವಸ್ತುನಿಷ್ಠ ಅಂಶವೊಂದೇ (Objective Criteria) ಸಾಲದು, ಎಲ್ಲಾ ರೈತ ಸಮೂಹಗಳು ತಾವೆಲ್ಲಾ ಒಂದೇ ವರ್ಗಕ್ಕೆ ಸೇರಿದವರಾಗಿರುವುದರಿಂದ ಸಮಾನವಾದ ಆಸಕ್ತಿಗಳನ್ನು ಹೊಂದಿರುವೆವೆಂಬ ಜಾಗೃತಿಯು ವರ್ಗಪ್ರಜ್ಞೆಯೊಂದಿಗೆ ಸೇರಿಕೊಂಡಿರುತ್ತದೆ.

ಇಂತಹ ವರ್ಗಪ್ರಜ್ಞೆಯೊಂದಿಗೆ ತಮ್ಮ ಸಾಮಾನ್ಯ ಆಸಕ್ತಿಗಳ ಈಡೇರಿಕೆಗಾಗಿ ಕೂಡಿ ಹೋರಾಡಿದಾಗ ಮಾತ್ರ ರೈತ ಸಮೂಹವೊಂದು ತನಗೆ ತಾನೇ ವರ್ಗವಾಗುವುದು ಎಂಬುದನ್ನು ರೈತ ಸಮೂಹಗಳು ಅರ್ಥ ಮಾಡಿಕೊಂಡರೆ, ಸರ್ಕಾರದ ಪಾಲುದಾರಿಕೆಯಲ್ಲಿ ಸಮೂಹವಾಗಿ ಭಾಗಿಯಾಗಿ ರೈತರ ಐಡೆಂಟಿಟಿಯಾಗಿ ಮಾರ್ಪಡಬಹುದು.

ADVERTISEMENT

ಹಾಲಪ್ಪ ಎಚ್.,ಮೂಡಲಹುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.