ADVERTISEMENT

ವಾಚಕರ ವಾಣಿ| ದೈವ ಮನಸ್ಸಿನ ಕಲಾಮಂದಿರವಾಗಲಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:57 IST
Last Updated 1 ಏಪ್ರಿಲ್ 2022, 16:57 IST

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ನಯನ ರಂಗಮಂದಿರದ ಬಾಡಿಗೆ ಪರಿಷ್ಕರಣೆ ಕುರಿತ ಸಚಿವರ ಹೇಳಿಕೆ ಸ್ವಾಗತಾರ್ಹ. ಆದರೆ ಇಲ್ಲಿ ಮುಖ್ಯವಾಗಿ ಆಗಬೇಕಿರುವ ಗುರುತರ ಬದಲಾವಣೆ ಎಂದರೆ, ರಂಗತಂಡವೊಂದು ಕಲಾಕ್ಷೇತ್ರವನ್ನು ಮೊದಲೇ ಕಾಯ್ದಿರಿಸಿದ್ದರೆ, ಅದೇ ದಿನ ಸರ್ಕಾರಿ ಕಾರ್ಯಕ್ರಮ ನಿಗದಿಯಾಯಿತೆಂಬ ಕಾರಣಕ್ಕೆ ರಂಗತಂಡಕ್ಕೆ ನೀಡಿದ್ದ ಬಳಕೆಯ ಅವಕಾಶವನ್ನು ಹಿಂಪಡೆಯುವ ಹಾಗಿಲ್ಲ. ಹಾಗೇನಾದರೂ ಪಡೆದರೆ ತಂಡಕ್ಕೆ ಆದ ಆರ್ಥಿಕ ನಷ್ಟವನ್ನು ಸರ್ಕಾರ ಭರಿಸಬೇಕು.

ರಂಗಮಂದಿರವನ್ನು ಕಾಯ್ದಿರಿಸಿ ಪ್ರಭಾವಿಗಳು ಹಾಗೂ ಮಧ್ಯವರ್ತಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುವ ವಿಚಾರದಲ್ಲಿ ತೆಗೆದುಕೊಂಡಿರುವ ಕ್ರಮ ಎಷ್ಟರಮಟ್ಟಿಗೆ ಜಾರಿಗೆ ಬರುವುದೋ ಕಾದು ನೋಡಬೇಕು. ಅದೇನೇ ಇರಲಿ, ಅಂತಹ ವ್ಯಕ್ತಿ ಹಾಗೂ ಸಂಸ್ಥೆಯ ಮೇಲೆ ಅತ್ಯುಗ್ರ ಕ್ರಮ ಕೈಗೊಳ್ಳಬೇಕಿದೆ. ರವೀಂದ್ರ ಕಲಾಕ್ಷೇತ್ರವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡದೆ, ಭಕ್ತರು ನೀಡುವ ಕಾಣಿಕೆ ಪಡೆದು ಆಶೀರ್ವಾದ ನೀಡುವ ದೈವ ಮನಸ್ಸಿನ ಕಲಾಮಂದಿರ ಎಂಬಂತೆ ಪೋಷಿಸಬೇಕಿದೆ.

- ಆರ್.ವೆಂಕಟರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.