ADVERTISEMENT

ಬೆಂಗಳೂರಿಗೆ ಸಿಂಹಪಾಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:56 IST
Last Updated 11 ಸೆಪ್ಟೆಂಬರ್ 2020, 15:56 IST

ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಒಂದೊಂದು ರಂಗಮಂದಿರವನ್ನು ಕಲಾಕ್ಷೇತ್ರದ ಮಾದರಿಯಲ್ಲಿ ನಿರ್ಮಿಸಲು ₹ 60 ಕೋಟಿ ವೆಚ್ಚ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಹೇಳಿರುವುದಾಗಿ ವರದಿಯಾಗಿದೆ. ಇಷ್ಟೊಂದು ಹಣವನ್ನು ಬರೀ ಬೆಂಗಳೂರಿನ ನಾಲ್ಕು ರಂಗಮಂದಿರಗಳಿಗೆ ಖರ್ಚು ಮಾಡುವ ಬದಲು ಪ್ರತೀ ಜಿಲ್ಲೆ ಹಾಗೂ ತಾಲ್ಲೂಕಿಗೆ ಹಂಚಿಕೆ ಮಾಡಿದರೆ, ನೂರಾರು ಹಳ್ಳಿಗಳಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಬಹುದಲ್ಲವೇ? ಕಲಾಕ್ಷೇತ್ರದಲ್ಲಿ ಗ್ರಾಮೀಣ ರಂಗಭೂಮಿಯದ್ದೇ ಸಿಂಹಪಾಲು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ?

ಅಲ್ಲಲ್ಲಿರುವ ತಾಲ್ಲೂಕು ರಂಗಮಂದಿರಗಳು ಹಾಳುಬಿದ್ದಿವೆ. ಹಳ್ಳಿಯಲ್ಲಿ ಹಲಗೆ ಜೋಡಿಸಿ ಒಂದು ತಾತ್ಕಾಲಿಕ ವೇದಿಕೆ ನಿರ್ಮಿಸಲು ಬಡ ಕಲಾವಿದರಿಗೆ ಹತ್ತು– ಹನ್ನೆರಡು ಸಾವಿರ ರೂಪಾಯಿಯೂ ಹೊರೆಯಾಗುತ್ತದೆ. ಆದರೂ ಗ್ರಾಮೀಣ ಕಲಾವಿದರ್‍ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಎಲ್ಲವೂ ಬೆಂಗಳೂರಿನ ಪಾಲಾಗುವುದು ನಿಶ್ಚಿತ.

-ಕೆ.ಜಗದೀಶ್,ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.