ADVERTISEMENT

ಇದು ಎಚ್‌ಎಂಟಿ ಸಮಯವಲ್ಲ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:30 IST
Last Updated 22 ಅಕ್ಟೋಬರ್ 2021, 19:30 IST

ಎಚ್ಎಂಟಿ ಗಡಿಯಾರ ಕಾರ್ಖಾನೆಯ ಎರಡನೇ ಘಟಕದ ಶಂಕುಸ್ಥಾಪನೆ ಸುದ್ದಿಯನ್ನು ‘50 ವರ್ಷಗಳ ಹಿಂದೆ’ ಅಂಕಣದಲ್ಲಿ (ಪ್ರ.ವಾ., ಅ. 22) ಓದಿ ಸಂತಸ, ದುಃಖ ಎರಡೂ ಆಯಿತು. 70-80ರ ದಶಕಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಬ್ರ್ಯಾಂಡ್ ಎಚ್ಎಂಟಿ.

ಆಕರ್ಷಕ ವಿನ್ಯಾಸದಿಂದ ಭಾರತ ಮತ್ತು ವಿದೇಶಗಳಲ್ಲಿ ತುಂಬ ಹೆಸರು ಮಾಡಿತ್ತು. ದೇಶದಲ್ಲಿ ನಡೆದ ಪ್ರಮುಖ ಕ್ರೀಡಾ ಪಂದ್ಯಾವಳಿಯ ಲಾಂಛನದ ಚಿತ್ರವನ್ನು ತನ್ನ ಡಯಲ್‌ನಲ್ಲಿ ತೋರಿಸಿತ್ತು. ವಿವಾಹ ಸಂಭ್ರಮಕ್ಕೆ ಅನುವಾಗುವಂತೆ ವಧು ವರರಿಗಾಗಿ ಜೋಡಿ ವಾಚ್ ಪರಿಚಯಿಸಿತು. ವಿದೇಶದಲ್ಲಿ ಯಾರೋ ಒಬ್ಬ ವ್ಯಕ್ತಿ ‘ಟೈಮ್ ಎಷ್ಟು?’ ಎಂದು ಒಬ್ಬ ಭಾರತೀಯನನ್ನು ಕೇಳಿದಾಗ ಅವನು ಸಮಯ ತಿಳಿಸಿದನಂತೆ. ವಿದೇಶಿಯನು ಅದು ‘ಜಿಎಂಟಿ ಸಮಯವೇ’ (ಗ್ರೀನ್‌ವಿಚ್‌ ಮೀನ್‌ ಟೈಮ್‌) ಎಂದು ಕೇಳಿದಾಗ, ‘ಇಲ್ಲ, ಇದು ಎಚ್ಎಂಟಿ ಸಮಯ’ ಎಂದು ನಮ್ಮ ಭಾರತೀಯ ಉತ್ತರಿಸಿದನಂತೆ!

ಈಗ ಶತಮಾನೋತ್ಸವದ ಸಂಭ್ರಮದಲ್ಲಿ ಇರಬೇಕಾಗಿದ್ದ ಒಂದು ವಿಶ್ವವಿಖ್ಯಾತ ಸಂಸ್ಥೆ ಇಂದು ಹೇಳ ಹೆಸರಿಲ್ಲದಂತೆ ಆಗಿರುವುದು ದುರಂತವೇ ಸರಿ. ಕಾಲಾಯ ತಸ್ಮೈ ನಮಃ.

ADVERTISEMENT

ಮುರುಗೇಶ್ ಹನಗೋಡಿಮಠ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.