ADVERTISEMENT

ಕನ್ನಡ ಕಲಿಯದ ಟಿಬೆಟಿಯನ್ನರು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮಾರ್ಚ್ 2020, 17:50 IST
Last Updated 20 ಮಾರ್ಚ್ 2020, 17:50 IST

ತಮ್ಮ ದೇಶದಿಂದ ಹೊರದೂಡಲ್ಪಟ್ಟು ನಿರಾಶ್ರಿತರಾಗಿ ಈ ದೇಶಕ್ಕೆ ವಲಸೆ ಬಂದ ಲಕ್ಷಾಂತರ ಟಿಬೆಟಿಯನ್ನರಿಗೆ ರಾಜ್ಯದ ಬೈಲುಕುಪ್ಪೆ ಮತ್ತು ಮುಂಡಗೋಡದಲ್ಲಿ ಆಶ್ರಯ ನೀಡಲಾಗಿದೆ. ಈವರೆಗೆ ಇವರು ಇತರರಂತೆ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಯುತ್ತಿದ್ದರು. ಆದರೆ, ಈಗ ಇವರು ತಮಗೆ ಕನ್ನಡ ಕಲಿಯಲು ಕಷ್ಟವಾಗಿದ್ದು, ಕನ್ನಡ ಕಲಿಕೆಯಿಂದ ತಮಗೆ ವಿನಾಯಿತಿ ನೀಡಬೇಕು ಎಂದು ಕೋರುತ್ತಿದ್ದಾರೆ.

ಇವರ ಕೋರಿಕೆಯನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಸಾರಾಸಗಟಾಗಿ ತಿರಸ್ಕರಿಸಿದರೂ, ಮುಂದಿನ ದಿನಗಳಲ್ಲಿ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬರುವುದರಲ್ಲಿ ಸಂಶಯವಿಲ್ಲ. ಬದುಕಿನ ಬಂಡಿ ನಡೆಸಲು ಈ ರಾಜ್ಯ ಬೇಕು, ಆದರೆ ಈ ರಾಜ್ಯದ ಭಾಷೆ ಬೇಡ ಎನ್ನುವುದು ಯಾವ ನ್ಯಾಯ? ಮುಖ್ಯ ಪ್ರವಾಹದಲ್ಲಿ ಸೇರಿ ಬದುಕು ನಡೆಸದೇ ಒಂದು ರೀತಿಯ ಪ್ರತ್ಯೇಕತೆಗೆ ಇಂಬು ಕೊಡುವುದು ಮುಂದಿನ ದಿನಗಳಲ್ಲಿ ಬೇರೆ ಸಮಸ್ಯೆಗೆ ಕಾರಣವಾಗಬಹುದು ಅಲ್ಲವೇ?

ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.