ADVERTISEMENT

ವಾಚಕರ ವಾಣಿ | ಪ್ಲಾಸ್ಟಿಕ್‌ ತ್ಯಾಜ್ಯ: ಧೋರಣೆ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 20:00 IST
Last Updated 14 ಮಾರ್ಚ್ 2022, 20:00 IST

‘ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣಿಕರು ಬಿಸಾಡಿದ್ದ ಪ್ಲಾಸ್ಟಿಕ್ ತೆರವು’, ‘ಮಹದೇಶ್ವರ ಬೆಟ್ಟದಲ್ಲಿ ಪ್ರಯಾಣಿಕರು ಎಸೆದಿದ್ದ ಪ್ಲಾಸ್ಟಿಕ್ ಸಂಗ್ರಹ’ ಎಂಬಂತಹ ಸುದ್ದಿಗಳನ್ನು ಓದಿದಾಗ, ಉತ್ತಮ ಕಾರ್ಯದ ಬಗ್ಗೆ ಹೆಮ್ಮೆ ಮೂಡುತ್ತದಾದರೂ ಪ್ಲಾಸ್ಟಿಕ್ ಅನ್ನು ಹೀಗೆ ಎಸೆಯುವ ಜನರ ಧೋರಣೆ ಬಗ್ಗೆ ಬೇಸರ ಉಂಟಾಗುತ್ತದೆ.

ಕಠಿಣ ಕಾನೂನಿನ ಹೊರತಾಗಿಯೂ ಅದರ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ, ಈ ರೀತಿಯ ಧೋರಣೆ ಜನರಲ್ಲಿ ಹೆಚ್ಚಾಗುತ್ತಲೇ ಇದೆ. ಈ ದಿಸೆಯಲ್ಲಿ ಜನರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಇಂತಹ ಸಕಾರಾತ್ಮಕ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ.
-ಮಧು ಎನ್.ಬಿ.,ನಾರನಹಳ್ಳಿ, ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT