ADVERTISEMENT

ಸಾರಿಗೆ ನೌಕರರ ಪ್ರತಿಭಟನೆ ಪರಿ ಸರಿಯೇ?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST

ಸಾರಿಗೆ ನೌಕರರ ಪ್ರತಿಭಟನೆ ಕೆಲವು ಅಹಿತಕರ, ಅಮಾನವೀಯ ಘಟನೆಗಳಿಂದ ತನ್ನ ಅರ್ಥ ಕಳೆದು ಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸರಿಯಾದ ಬೇಡಿಕೆಗಳಷ್ಟೇ, ಅವುಗಳ ಈಡೇರಿಕೆಗೆ ಆಗ್ರಹಿಸಿ ನಡೆಯುವ ಪ್ರತಿಭಟನಾ ಮಾರ್ಗವೂ ಮುಖ್ಯವಾಗುತ್ತದೆ ಎಂಬುದನ್ನು ನೌಕರರು ಮರೆತಂತಿದೆ. ಅದರಲ್ಲೂ, ಬಾಗಲಕೋಟೆ ಭಾಗದಲ್ಲಿ ಕರ್ತವ್ಯನಿರತರಾಗಿದ್ದ ಹಿರಿಯ ಚಾಲಕ ನಬಿ ರಸೂಲ್‌ ಆವಟಿ ಅವರನ್ನು ಸಂಸ್ಥೆಯ ಸಹೋದ್ಯೋಗಿಗಳೇ ಕಲ್ಲು ಹೊಡೆದು ಸಾಯಿಸಿದ್ದಾರೆ ಎನ್ನಲಾದ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸು
ವಂತಹದ್ದು.

ಅಪಘಾತರಹಿತ ಚಾಲನೆಗೆ ಪುರಸ್ಕಾರ ಪಡೆದು, ನಿವೃತ್ತಿಯ ಅಂಚಿನಲ್ಲಿದ್ದ ಆ ಹಿರಿಯ ಜೀವ ಹೀಗೆ ಸಾವಿಗೀಡಾದುದು ಅತ್ಯಂತ ಆಘಾತಕಾರಿ. ತಮಗೆ ಕಲ್ಲು ತಗುಲಿ ರಕ್ತ ಕಾರುತ್ತಿದ್ದರೂ ವಾಹನವನ್ನು ಎಚ್ಚರಿಕೆ ಯಿಂದ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿರುವ ರಸೂಲ್‌ ಅವರ ಕರ್ತವ್ಯಪ್ರಜ್ಞೆ ಶ್ಲಾಘನೀಯ. ತಮಗೆ ಅನ್ನ ನೀಡಿದ, ಜೀವನ ಕಟ್ಟಿಕೊಟ್ಟ ವಾಹನಗಳಿಗೆ ತಾವೇ ಕಲ್ಲು ತೂರುವುದು, ಕರ್ತವ್ಯಕ್ಕೆ ಹಾಜರಾದ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸುವುದು ಸಮಾಜಘಾತುಕ ಕೃತ್ಯಗಳಾಗುತ್ತವೆ. ಇಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.

- ಡಾ. ಆನಂದ್‌ ಎನ್‌.ಎಲ್‌.,ಅಜ್ಜಂಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.