ADVERTISEMENT

ಮರ ಕಡಿಯಲೇಬೇಕೆ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 19:40 IST
Last Updated 12 ಮಾರ್ಚ್ 2020, 19:40 IST

ಸರ್ಕಾರಿ ಒಡೆತನದ ಜಮೀನು , ಕೆರೆಗಳನ್ನು ರೈತರು ಕೆಲವೆಡೆ ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿರುತ್ತಾರೆ. ಇಂತಹ ಒತ್ತುವರಿಯನ್ನು ತೆರವು ಮಾಡಿಸಲು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವುದು ಸಹಜ. ಆದರೆ ಈ ಸಂದರ್ಭದಲ್ಲಿ, ಅಲ್ಲಿ ಸೊಂಪಾಗಿ ಬೆಳೆದಿರುವ ಅಡಿಕೆ, ತೆಂಗು ಮುಂತಾದ ಮರಗಳನ್ನು ಕಡಿಯುವ ಬದಲು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಮರ– ಗಿಡಗಳನ್ನು ಕಡಿದು ಪರಿಸರ ಹಾಳು ಮಾಡದಿರಲಿ.

-ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT