ADVERTISEMENT

ಮಾತಿನ ವ್ಯತ್ಯಾಸ ಗ್ರಹಿಸಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಫೆಬ್ರುವರಿ 2020, 15:22 IST
Last Updated 5 ಫೆಬ್ರುವರಿ 2020, 15:22 IST

‘ಜೀವನೋಪಾಯಕ್ಕಾಗಿ ಒಂದು ಅಂಗನವಾಡಿಯಲ್ಲಿ ಆಯಾ ಕೆಲಸ ನೀಡಿ, ಆ ಕೆಲಸ ಸಿಕ್ಕದೇ ಹೋದರೆ ನನ್ನೆರಡು ಮಕ್ಕಳನ್ನು ಸಾಕುವುದು ಕಷ್ಟ. ಇಲ್ಲದೇ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಿದೆ’ ಎಂದು ಮಹಿಳೆಯೊಬ್ಬರು ಜನಸ್ಪಂದನ ಸಭೆಯಲ್ಲಿ ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ದಾವಣಗೆರೆ ಜಿಲ್ಲಾಧಿಕಾರಿಯು ಸಭೆಯಲ್ಲಿ ಹಾಜರಿದ್ದ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿ, ಠಾಣೆಯಲ್ಲಿ ಕೂರಿಸಿ ಪ್ರಕರಣ ದಾಖಲಿಸಲು ಆದೇಶಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನಿಷ್ಠಮಟ್ಟದ ಜೀವನ ನಡೆಸಲೂ ಆಗದೆ ಹತಾಶೆಯಿಂದ ಹೇಳಿದ ಮಾತಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ ರೀತಿ ಅಮಾನವೀಯವಾಗಿದೆ.

ಹತಾಶೆಯ ಮಾತಿಗೂ ಅಪರಾಧ ಮನೋಭಾವದಿಂದ ಹೇಳುವ ಮಾತಿಗೂ ಇರುವ ವ್ಯತ್ಯಾಸವನ್ನು ಗ್ರಹಿಸದಷ್ಟು ಆಡಳಿತ ವ್ಯವಸ್ಥೆಯು ಬೌದ್ಧಿಕವಾಗಿ ಕುಸಿದುಹೋಗಿದೆ. ವಿಪರ್ಯಾಸವೆಂದರೆ, ಕೆಲವು ದಿನಗಳ ಹಿಂದೆ ಈ ಅಧಿಕಾರಿಯು ತನ್ನ ಕುಟುಂಬ ಹಿಂದೆ ಅನುಭವಿಸಿದ ಬಡತನದ ಕುರಿತು ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದರು!

ಕೆ.ಬಿ.ಕೆ.ಸ್ವಾಮಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.