ADVERTISEMENT

ಬೇಡಿಕೆ ಇಲ್ಲದ ಸೌಲಭ್ಯ...

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 18:45 IST
Last Updated 25 ಜೂನ್ 2020, 18:45 IST

ಜನರಿಂದ ಬೇಡಿಕೆ ಬರದೇ ಒದಗಿಸುವ ಸರ್ಕಾರದ ಸೌಲಭ್ಯಗಳು ಹೇಗೆ ಸಾರ್ವಜನಿಕರ ತೆರಿಗೆ ಹಣದ ದುರುಯೋಗಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಶ್ರೀಧರ್ ಎಸ್.ಬಿ. ಅವರ ‘ಗ್ರಂಥಾಲಯ ವ್ಯವಸ್ಥೆ ಪುನರ್ ಸಂಘಟಿಸಿ’ ಚಿಂತನೆ (ವಾ.ವಾ., ಜೂನ್ 24) ಒಂದು ಉದಾಹರಣೆಯಷ್ಟೆ. ಪ್ರತೀ ಗ್ರಾಮ ಪಂಚಾಯಿತಿಗೆ ಒಂದು ಗ್ರಂಥಾಲಯದಂತೆ ರಾಜ್ಯದಲ್ಲಿ ಸಾವಿರಾರು ಗ್ರಂಥಾಲಯಗಳನ್ನು ತೆರೆಯಲಾಯಿತು. ಆದರೆ, ಇವುಗಳನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಯಾವುದೇ ಪೂರ್ವತಯಾರಿ ಮಾಡಿಕೊಳ್ಳದೇ ಇದ್ದದ್ದು ಅವ್ಯವಸ್ಥೆಗೆ ಎಡೆಯಾಯಿತು.

ಉದಾಹರಣೆಗೆ, ಗ್ರಾಮದಲ್ಲಿ ಆಸಕ್ತ ಓದುಗರು ಇದ್ದಾರೆಯೇ ಎಂಬ ಸಮೀಕ್ಷೆ ನಡೆಸುವುದು ಮತ್ತು ಆಸಕ್ತರ ಸಂಖ್ಯೆ ಇಲ್ಲದ ಕಡೆ ಅಲ್ಲಿರುವ ಜನರಲ್ಲಿ ಓದುವ ಆಸಕ್ತಿ ಕೆರಳಿಸುವಂತಹ ಕಾರ್ಯಕ್ರಮಗಳನ್ನು ಗ್ರಂಥಾಲಯ ಇಲಾಖೆ ಜಾರಿಗೆ ತರಬೇಕಿತ್ತು. ದುರ್ದೈವವೆಂದರೆ, ಓದುಗನನ್ನು ಗಮನದಲ್ಲಿ ಇರಿಸಿಕೊಳ್ಳದೆ ಕೇವಲ ನೌಕರಿ ಸೃಷ್ಟಿಸುವುದು ಹಾಗೂ ಪುಸ್ತಕ, ಪೀಠೋಪಕರಣದಂತಹ ಮೂಲ ಸೌಲಭ್ಯಗಳನ್ನು ಒದಗಿಸುವಂತಹ ಯೋಜನೆಗಳಿಗೇ ಆದ್ಯತೆ ನೀಡಿದ್ದರಿಂದ ಸರ್ಕಾರಕ್ಕೆ ಅನವಶ್ಯಕ ಹೊರೆ ಆದಂತಾಯಿತು.

-ಡಾ. ಜಿ.ಬೈರೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.