ADVERTISEMENT

ವಿಶ್ವವಿದ್ಯಾಲಯಗಳ ವಿಶ್ವರೂಪ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 17:13 IST
Last Updated 1 ಆಗಸ್ಟ್ 2021, 17:13 IST

‘ಸುಣ್ಣ ನುಂಗುತ್ತಿರುವ ಗೋಡೆಗಳು’ ಶೀರ್ಷಿಕೆಯ ಲೇಖನದಲ್ಲಿ (ಪ್ರ.ವಾ., ಜುಲೈ 30) ಸಬಿತಾ ಬನ್ನಾಡಿ
ಅವರು ಉನ್ನತ ಶಿಕ್ಷಣ ತಲುಪಿರುವ ಅವನತಿಯ ವಿಶ್ವರೂಪವನ್ನು ಅನಾವರಣಗೊಳಿಸಿದ್ದಾರೆ. ನಮ್ಮ ಪ್ರಲಾಪಗಳು ಬೇವನ್ನು ಬಿತ್ತಿ ಮಾವನ್ನು ಬಯಸಿದಂತೆ ಆಗಿವೆ. ಯಾವುದೇ ಪ್ರಾಯೋಗಿಕವಾದ ಗುಣಮಟ್ಟದ ಮಾನದಂಡಗಳಿಲ್ಲದೆ, ಬಹುತೇಕ ಅಡ್ಡದಾರಿಗಳಲ್ಲಿ ಆಯ್ಕೆಯಾಗುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಂದ ಒಳ್ಳೆಯದನ್ನು, ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಮೂಲಕ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೇಮಕ ಮಾಡಲು ಮುಂದಡಿ ಇಟ್ಟಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಸ್ವಾಯತ್ತತೆಯ ನೆಪವೊಡ್ಡಿ ಇದನ್ನು ವಿರೋಧಿಸಿದರು. ಅದು ನನೆಗುದಿಗೆ ಬಿದ್ದಿತು.

ಪ್ರಸ್ತುತ ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಈಗಲಾದರೂ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ
ರನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಬೇಕಾಗಿದೆ. ಸಮರ್ಥರನ್ನು ಹೊರಗಿಟ್ಟು ಅಸಮರ್ಥರನ್ನು ಒಳಗೆ ತರುವುದು ಅತ್ಯಂತ ಹೇಯವಾದ ಕೆಲಸ. ದುರಂತವೆಂದರೆ, ಇದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಒಂದು ‘ಡಿ’ ಗ್ರೂಪಿನ ನೌಕರಿ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ಇರುವಾಗ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗೆ ಏಕಿಲ್ಲ?

-ಗಿರೀಶ್‌ ಮತ್ತೇರ,ಹನುಮಂತದೇವರ ಕಣಿವೆ, ಹೊಳಲ್ಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.