ADVERTISEMENT

ಅಸ್ಪೃಶ್ಯತೆ ಆಚರಣೆ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST

ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವ, ಅದರಲ್ಲೂ ದೇವಾಲಯಗಳ ಪ್ರವೇಶಕ್ಕೆ ದಲಿತರಿಗೆ ಅವಕಾಶ ನೀಡದೇ ಇರುವ ಹಾಗೂ ದಲಿತರಿಗೆ ಕ್ಷೌರ ಮಾಡದಿರುವ ಬಗೆಗಿನ ವರದಿಗಳನ್ನು ದಿನಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತಲೇ ಇರುತ್ತೇವೆ. ಇವು ಅಕ್ಷಮ್ಯ. ಇಂತಹ ಸ್ಥಿತಿಯಲ್ಲಿ, ದಲಿತರು ಏಕೆ ದೇವಾಲಯಗಳಿಗೆ ಭೇಟಿ ನೀಡಬೇಕು? ಅದರಿಂದ ಅವರಿಗಾಗುವ ಪ್ರಯೋಜನವಾದರೂ ಏನು? ಅದರಿಂದ ಸಿಗುವುದು ಅವಮಾನವೇ ವಿನಾ ಮನಃಶಾಂತಿಯಲ್ಲ ಎಂಬುದನ್ನು ಅವರು ತಿಳಿಯಬೇಕು.

ದಲಿತರೇ ಕ್ಷೌರ ಕೌಶಲವನ್ನು ಬೆಳೆಸಿಕೊಳ್ಳಬಹುದಲ್ಲವೇ? ಇಲ್ಲಿ ನಮ್ಮ ದೌರ್ಬಲ್ಯಗಳೇ ಅಸ್ಪೃಶ್ಯತೆಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟಂತಿವೆ. ಸ್ವಾಭಿಮಾನ ಎಂಬುದು ಕೇವಲ ಭಾಷಣ, ಪ್ರವಚನ, ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಂಡಿದೆ ವಿನಾ ಕಾರ್ಯಗತವಾಗಿಲ್ಲ. ಬುದ್ಧ, ಅಂಬೇಡ್ಕರ್ ಹೆಸರು ಹೇಳಿಕೊಂಡು ಭಾಷಣ ಮಾಡುವವರು ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಯುವಕರಿಗೆ ಬೇಕಾಗಿರುವುದು ಉದ್ಯೋಗವೇ ಹೊರತು ಉಚಿತ ಉಪದೇಶವಲ್ಲ. ಉಪವಾಸದಿಂದ ಬಳಲುತ್ತಿರುವವನಿಗೆ ಎಷ್ಟೇ ಉಪದೇಶ ನೀಡಿದರೂ ಪ್ರಯೋಜನವಾಗದು.

–ಮಹದೇವಸ್ವಾಮಿ ಎಚ್.ಪಿ., ಹೊರಳಹಳ್ಳಿ, ಟಿ.ನರಸೀಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.