ADVERTISEMENT

ಪೊಲೀಸರಿಗೆ ಸಂಯಮ ಇರಲಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 19:30 IST
Last Updated 27 ಮಾರ್ಚ್ 2020, 19:30 IST

ಕೊರೊನಾ ದಿಗ್ಬಂಧನ ಜಾರಿಗಾಗಿ ಪೊಲೀಸರು ಲಾಠಿ ಪ್ರಯೋಗಿಸುತ್ತಿರುವ ದೃಶ್ಯಗಳು ಬಹಳ ಕ್ರೂರವಾಗಿವೆ. ಜನ ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಬಾರದು, ನಿಜ. ಆದರೆ ಸಾಮಾನ್ಯವಾಗಿ ಯಾವ ಬಲವಾದ ಕಾರಣವೂ ಇಲ್ಲದೆ ಅವರು ಸುಮ್ಮನೆ ಹೊರಗೆ ಬರುವುದಿಲ್ಲ. ಹಾಗೆ ಬಂದರೆ ಕ್ರಮ ಜರುಗಿಸಲಿ. ದಿಢೀರ್ ದೀರ್ಘ ದಿಗ್ಬಂಧನದ ಕಾರಣಕ್ಕಾಗಿ ತಮ್ಮ ಗ್ರಾಮಗಳಿಗೆ ಹೊರಟವರನ್ನು ಹಿಂಸಿಸುವುದು ಸರಿಯಲ್ಲ. ಬೈಕ್ ಮೇಲೆ ಹೋಗುವವರನ್ನು ಅಮಾನುಷವಾಗಿ ಥಳಿಸುವುದು ವಿವೇಕ ಅಲ್ಲ.
ಒಬ್ಬ ಬೈಕ್ ಸವಾರನು ಹೆಂಡತಿ, ಸಣ್ಣ ಮಗಳೊಂದಿಗೆ ಹೊರಟಾಗ, ಬೈಕ್‌ನಿಂದ ಇಳಿಸಿ ಅವರ ಮುಂದೆಯೇ ಥಳಿಸಿದ್ದು ಅಮಾನವೀಯ. ದೊಂಬಿ, ಗಲಭೆಗಳ ಕಾಲಕ್ಕೆ ಲಾಠಿ ಪ್ರಯೋಗ ಸರಿ. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಹೆಚ್ಚು ಸಂಯಮ ಇರಲಿ.

ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT