ಕೊರೊನಾ ಸೋಂಕುಪೀಡಿತರ ಆರೈಕೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಲಾಕ್ಡೌನ್ ನೆಪದಲ್ಲಿ ಒಪಿಡಿ ಹಾಗೂ ಇತರ ಸೇವೆಗಳನ್ನು ಬಂದ್ ಮಾಡಿವೆ. ಹಾಗಿದ್ದರೆ, ಹಣ ಕೀಳುವ ಸಂದರ್ಭಗಳಲ್ಲಷ್ಟೇ ಈ ಆಸ್ಪತ್ರೆಗಳು ರೋಗಿಗಳಿಗೆ ಸೇವೆ ನೀಡುವುದೇ? ಸರ್ಕಾರಿ ಆಸ್ಪತ್ರೆಗಳಲ್ಲಿರುವ, ಕೊರೊನಾ ವೈರಸ್ಗೆ ಸಂಬಂಧಪಡದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ, ಕೊರೊನಾ ಸೋಂಕುಪೀಡಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷೆ ಸುಲಭವಾಗುತ್ತದೆ. ಅಲ್ಲದೆ ವೈರಾಣು ಹರಡುವುದನ್ನೂ ಮಿತಿಗೊಳಿಸಬಹುದು. ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಈ ಸಾಮಾಜಿಕ ಸೇವೆಯ ಪರಿಧಿಗೆ ತರಬಹುದು. ಖಾಸಗಿ ಆಸ್ಪತ್ರೆಗಳು ಒಪ್ಪದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಗಂಗಾಧರ ಅಂಕೋಲೆಕರ,ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.