ADVERTISEMENT

ಹೇಳಿಕೆ ಜಗಜ್ಜಾಹೀರು: ಆದೇಶದ ಉಲ್ಲಂಘನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಏಪ್ರಿಲ್ 2021, 20:30 IST
Last Updated 12 ಏಪ್ರಿಲ್ 2021, 20:30 IST

ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯು ಸಿಆರ್‌ಪಿಸಿ ಸೆಕ್ಷನ್ 164ರ ಅನ್ವಯ ದಂಡಾಧಿಕಾರಿಗಳ ಸಮಕ್ಷಮ ನೀಡುವ ಹೇಳಿಕೆಯು ಗೋಪ್ಯವಾಗಿರಬೇಕು. ಆ ಮಹಿಳೆಯು ನೀಡುವ ಹೇಳಿಕೆಯನ್ನು ಬಹಿರಂಗಪಡಿಸುವಂತಿಲ್ಲ. ತನಿಖೆ ಮುಗಿದು ದೋಷಾರೋಪ ಪಟ್ಟಿ ಸಲ್ಲಿಸುವವರೆಗೂ ಈ ಹೇಳಿಕೆಯ ಅಂಶಗಳು ಆರೋಪಿಗೆ ತಿಳಿಯಬಾರದು ಎಂದು ಸುಪ್ರೀಂ ಕೋರ್ಟ್‌ ಹಲವಾರು ಬಾರಿ ತೀರ್ಪು ನೀಡಿದೆ. ಅಷ್ಟೇ ಅಲ್ಲ, ಈ ಸೆಕ್ಷನ್‌ನ ಅನ್ವಯ ಯಾವುದೇ ವ್ಯಕ್ತಿಯು ದಂಡಾಧಿಕಾರಿಗಳ ಸಮಕ್ಷಮ ಹೇಳಿಕೆ ನೀಡಲಿದ್ದಾರೆ ಎಂಬ ವಿಷಯವನ್ನೂ ಬಹಿರಂಗಪಡಿಸುವಂತಿಲ್ಲ.

ಕಾನೂನು ಪ್ರಕ್ರಿಯೆ ಹೀಗಿರುವಾಗ, ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿ.ಡಿ ಪ್ರಕರಣದಲ್ಲಿ ಸಂತ್ರಸ್ತೆಯು ಸಿಆರ್‌ಪಿಸಿ ಸೆಕ್ಷನ್ 164ರ ಅನ್ವಯ ಹೇಳಿಕೆ ನೀಡಲಿರುವ ವಿಷಯ ಬಹಿರಂಗವಾಗಿ ಎಲ್ಲಾ ಮಾಧ್ಯಮ ಗಳಲ್ಲಿ ಜಗಜ್ಜಾಹೀರಾಯಿತು. ಜೊತೆಗೆ ಆಕೆ ನೀಡಿದ್ದಾರೆ ಎಂಬ ಹೇಳಿಕೆಯ ಸಾರಾಂಶವೂ ಸಾರ್ವಜನಿಕವಾಗಿ ಬಟಾ ಬಯಲಾಯಿತು. ಇದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ.

- ಪಿ.ಜೆ.ರಾಘವೇಂದ್ರ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.