ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ಲಾರಿ ಮಾಲೀಕರು ಹಾಗೂ ಚಾಲಕರು ವರ್ಷಕ್ಕೆ 47,852 ಕೋಟಿ ಲಂಚ ನೀಡುತ್ತಿರುವುದನ್ನು ಸಮೀಕ್ಷೆಯೊಂದು ಪತ್ತೆ ಹಚ್ಚಿರುವುದನ್ನು ತಿಳಿದು (ಪ್ರ.ವಾ., ಫೆ. 29) ಅಸಹ್ಯವಾಯಿತು ಮತ್ತು ಅಸಮಾಧಾನವೂ ಉಂಟಾಯಿತು. ಯಾವಾಗ ಕೊಡುವವರು ಇರುತ್ತಾರೋ ಅಲ್ಲಿಯವರೆಗೂ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಲಾರಿಗಳ ಮಾಲೀಕರು ಹಾಗೂ ಚಾಲಕರು ಯಾವುದೇ ಕಾರಣಕ್ಕೂ ಲಂಚ ನೀಡದೆ ಪ್ರಾಮಾಣಿಕವಾಗಿ ನಡೆದುಕೊಂಡರೆ, ಇಂತಹ ಸ್ಥಿತಿಯನ್ನು ಸರಿಪಡಿಸಲು ಸಾಧ್ಯ.
- ಬಿ.ಎಸ್.ಮುಳ್ಳೂರ್, ರಾಮದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.