ADVERTISEMENT

ರಾಜಕಾರಣಿಗಳಿಗೆ ವಿದ್ಯಾರ್ಹತೆ ನಿಗದಿಪಡಿಸಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:45 IST
Last Updated 1 ಮಾರ್ಚ್ 2020, 19:45 IST

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಹೇಳಿದ್ದಾರೆ. ಈ ವಿಷಯ ತುಂಬಾ ಮಹತ್ವವುಳ್ಳದ್ದು. ಸರ್ಕಾರಿ ಹುದ್ದೆಯೊಂದನ್ನು ಪಡೆಯಲು ವಿದ್ಯಾರ್ಹತೆ ನಿಗದಿಗೊಳಿಸುವ ರಾಜಕಾರಣಿಗಳಿಗೆ ಮಾತ್ರ ವಿದ್ಯಾರ್ಹತೆ ಇರಬಾರದೇ?

ಗ್ರಾಮ ಪಂಚಾಯಿತಿಯಿಂದ ಹಿಡಿದು ಶಾಸಕರು, ಸಂಸದರವರೆಗೂ ಅಗತ್ಯ ವಿದ್ಯಾರ್ಹತೆಯನ್ನು ನಿಗದಿ
ಗೊಳಿಸಬೇಕು. ಹಾಗೆಯೇ ರಾಜಕಾರಣಿಗಳ ನಿವೃತ್ತಿ, ಅರ್ಹತೆ, ಪಕ್ಷಾಂತರ ಹಾಗೂ ಚುನಾವಣೆಗೆ ಸ್ಪರ್ಧಿಸುವ ಬಗೆಗಿನ ಕಾನೂನುಗಳಿಗೂ ತಿದ್ದುಪಡಿ ಆಗಬೇಕು. ಇದರಿಂದ, ನವ ಉತ್ಸಾಹಿಗಳಿಗೆ ರಾಜಕೀಯ ಅವಕಾಶದ ಬಾಗಿಲು ತೆರೆಯುತ್ತದೆ. ತಂತ್ರಜ್ಞಾನ ಯುಗದಲ್ಲಿ ಆಧುನಿಕತೆಯ ಹರಿವು ಕೂಡ ಹೆಚ್ಚಾಗುತ್ತದೆ.

ಗುರುಪ್ರಸಾದ್ ವರುಣ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.